



ಕಾರ್ಕಳ: ಹೆಬ್ರಿ ತಾಲ್ಲೂಕು ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿಗಳ ವತಿಯಿಂದ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಗುರಿ ತೋರಿದ ಗುರುವಿಗೆ ಗೌರವದ ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ಬುಧವಾರ ಅಜೆಕಾರಿನಿಂದ ಹೊರಟು ಮುನಿಯಾಲು, ವರಂಗ ಮುದ್ರಾಡಿ ಹೆಬ್ರಿಯಿಂದ ಶಿವಪುರ ಹಿರಿಯಡ್ಕ ಮೂಲಕ ಕಟಪಾಡಿ ವಿಶ್ವನಾಥ ಕ್ಷೇತ್ರದ ವರೆಗೆ ನಡೆಯಿತು. ಹೆಬ್ರಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ತೆರಳಲಾಯಿತು. ಮುಖಂಡರಾದ ಮುದ್ರಾಡಿ ಮಂಜುನಾಥ ಪೂಜಾರಿ, ಹೆಬ್ರಿ ಶೀನ ಪೂಜಾರಿ, ಶಿವಪುರ ರಮೇಶ ಪೂಜಾರಿ, ಬೈದರಬೆಟ್ಟು ಬೋಜ ಪೂಜಾರಿ, ಜರ್ವತ್ತು ಭೋಜ ಪೂಜಾರಿ, ವರಂಗ ವಿಠ್ಠಲ ಪೂಜಾರಿ, ಹೆಬ್ರಿ ಜಯಕರ ಪೂಜಾರಿ ಸೇರಿದಂತೆ ನೂರಾರು ಪ್ರಮುಖರು, ಬಿಲ್ಲವ ಸಮಾಜ ಬಾಂದವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.