



ಕಾರ್ಕಳ: ಕೆರೆಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಕಬ್ಬಿನಾಲೆಯ ಬಾಯಾರಾಗ್ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಜೋಲಿಮಾರು ಅಣ್ಣಪ್ಪ ಗೌಡ (45) ಮತ್ತು ಅವರ ಅಣ್ಣನ ಮಗ ಹೊಂಡದರ್ಕಾಲು ಅಶೋಕ್ ಗೌಡ (20) ಮೃತಪಟ್ಟವರು.
ಫೆ. 6 ರಂದು ಕಬ್ಬಿನಾಲೆ ಗ್ರಾಮದ ಬರಡೆ ಬ್ಯಾಕರಲ್ಲಿ ದೈವದ ನೇಮೋತ್ಸವಕ್ಕೆ ಹೋಗಿದ್ದ ಇವರು ಸಂಜೆ ಸಂಬಂಧಿ ದಯಾನಂದರ ಮನೆ ಹೋಗಿ ಅಲ್ಲಿಂದ ರಾತ್ರಿ 7:45 ರ ಸುಮಾರಿಗೆ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಣ್ಣಪ್ಪಗೌಡ ಅವರು ಸಿಜು ಮೋನ್‌ರವರ ಜಾಗದಲ್ಲಿರುವ ಕೆರೆಗೆ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದಿದ್ದು, ಇವರನ್ನು ರಕ್ಷಿಸಲು ಅಶೋಕ್ ಗೌಡ ಅವರೂ ನೀರಿಗೆ ಇಳಿದಿದ್ದರು. ಆದರೆ ಇಬ್ಬರೂ ಈಜುಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಅಣ್ಣಪ್ಪಗೌಡರ ಮೃತದೇಹವನ್ನು ಮೇಲಕ್ಕೆತ್ತಿದ್ದರು. ಬಳಿಕ ಮಂಗಳವಾರ ಬೆಳಿಗ್ಗೆ ಅಶೋಕ್ ಗೌಡರವರ ಮೃತದೇಹವನ್ನು ಕೆರೆಯ ನೀರನ್ನು ಬತ್ತಿಸಿ ಮೇಲಕ್ಕೆತ್ತಲಾಯಿತು. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.