logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿ: ವಾಲಿಬಾಲ್ ಆಟಗಾರ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
1 Feb 2022
post image

ಹೆಬ್ರಿ: ವಾಲಿಬಾಲ್ ಆಟಗಾರನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಕೆಳಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹೆಬ್ರಿ ಕೆಳಪೇಟೆಯ ನಿವಾಸಿ 30 ವರ್ಷದ ಪ್ರಶಾಂತ್ ಯಾನೆ ಪಚ್ಚು ಎಂಬಾತ ನೇಣಿಗೆ ಶರಣಾದ ಯುವಕ. ಈತ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದನು. ಅಲ್ಲದೆ, ಉತ್ತಮ ವಾಲಿಬಾಲ್ ಪಟು ಕೂಡ ಆಗಿದ್ದನು. ಹೆಬ್ರಿ ಎಪಿಟಿ ಹಾಗೂ ಎರ್ಲಪಾಡಿ ವಾಲಿಬಾಲ್ ಟೀಂಗಳಲ್ಲಿ ಆಡುತ್ತಿದ್ದನು ಎನ್ನಲಾಗಿದೆ. ಉತ್ತಮ ವಾಲಿಬಾಲ್ ಪೇಸರ್ ಕೂಡ ಆಗಿದ್ದನು. ಇತ್ತೀಚೆಗೆ ಪ್ರಶಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಖಿನ್ನತೆಯಲ್ಲಿ ಚಿಕ್ಕಪ್ಪನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.