



ಕಾರ್ಕಳ, ಡಿ.೯ : ತಮಿಳುನಾಡಿನ ಕುನೂರು ಬಳಿ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ಮಡಿದ ಯೋಧರಲ್ಲಿ ಹರ್ಜಿಂದರ್ ಸಿಂಗ್ ಕಾರ್ಕಳ ಮೂಲದ ಆಗ್ನೆಸ್ ಪ್ರಫುಲ್ಲ ಮಿನೇಜಸ್ ಅವರನ್ನು ಮದುವೆಯಾಗಿದ್ದರು . ದುರಂತಕ್ಕೀಡಾದ ಹೆಲಿಕಾಪ್ಟರ್ ನಲಿ ಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಕಾರ್ಕಳ ಮೂಲದ ಸೇನೆಯಲ್ಲಿ ಕರ್ತವ್ಯದಲ್ಲಿರುವ ಯುವತಿಯನ್ನು ಮದುವೆಯಾಗಿದ್ದರು. ಕಾರ್ಕಳ ನಗರದ ಸಾಲ್ಮರದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೆಸ್ ಪ್ರಫುಲ್ಲ ಮಿನೇಜಸ್ ಸದ್ಯ ಸೇನೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯ ಸಲ್ಲಿಸುತಿದ್ದಾರೆ.ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಪ್ರಫುಲ್ಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ತಂದೆ- ತಾಯಿ ನೆಲೆಸಿದ್ದ ಸಾಲ್ಮರಕ್ಕೆ ದಂಪತಿ ಹಲವು ಬಾರಿ ಭೇಟಿ ನೀಡಿದ್ದರು. ರಜೆ ಸಂದರ್ಭಗಳಲ್ಲಿ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಊರಿಗೆ ಬಂದು ಹೋಗುತ್ತಿದ್ದರು ಆಗ್ನೆಸ್ ಪ್ರಫುಲ್ಲ ಅವರ ತಾಯಿ ಮೇರಿ ಮಿನೇಜಸ್ ಈಗಲೂ ಸಾಲ್ಮರದಲ್ಲಿಯೇ ವಾಸವಿದ್ದಾರೆ. ಡಿ.೮ರ ಹೆಲಿಕಾಪ್ಟರ್ ದುರಂತದಲ್ಲಿ ತಿಳಿಯುತ್ತಿದ್ದಂತೆ, ಮನೆಯಲ್ಲಿ ಸ್ಮಶಾನ ಮೌನವಾಗಿತ್ತು.ಸಂಭAದಿಕರು ಶೋಕದಲ್ಲಿ ಮುಳುಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.