logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಅಖಿಲ ಭಾರತ ಕೊಂಕಣಿ ಸಮ್ಮೇಳನಕ್ಕೆ ಹೇಮಾ ನಾಯ್ಕ್ ಅಧ್ಯಕ್ಷೆ

ಟ್ರೆಂಡಿಂಗ್
share whatsappshare facebookshare telegram
4 Nov 2023
post image

ಮಂಗಳೂರು: ನ.4 ಶನಿವಾರ ಮತ್ತು 5 ಆದಿತ್ಯವಾರ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ ಇಲ್ಲಿ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯಸಮ್ಮೇಳನದಲ್ಲಿ, ಎರಡೂ ದಿನ ಪರಿಸಂವಾದ, ಸಾಹಿತ್ಯ ಸಾದರೀಕರಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಹಬ್ಬ ನಡೆಯಲಿದೆ. ಖ್ಯಾತ ಹಿಂದಿ ಕವಿ, ವಿಮರ್ಷಕ ವಿದ್ವಾಂಸ ಉದಯನ್ ವಾಜಪೇಯಿ ಇವರು ಶನಿವಾರ ದಿನಾಂಕ 4 ರಂದು ಪೂರ್ವಾಹ್ನ 10 ಕ್ಕೆ ಸಮ್ಮೇಳನ ಉದ್ಘಾಟಿಸಿ ‘ಸಾಹಿತ್ಯ ಮತ್ತು ಬದುಕು ಈ ಕುರಿತು ಶಿಖರೋಪನ್ಯಾಸ ನೀಡಲಿದ್ದಾರೆ.

ಸಮ್ಮೇಳನದ ಸರ್ವಾಧ್ಯಕ್ಷೆ ಖ್ಯಾತ ಕಾದಂಬರಿಕಾರ್ತಿ ಮತ್ತು ಕೊಂಕಣಿ ಚಳುವಳಿಯ ಮುಂದಾಳು ಶ್ರೀಮತಿ ಹೇಮಾ ನಾಯ್ಕ್ ಸಮ್ಮೇಳನದಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಭಾನುವಾರ ಸಂಜೆ 3.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಖ್ಯಾತ ಕನ್ನಡ ಸಾಹಿತಿ, ಪ್ರಾಧ್ಯಾಪಕಿ ಮಮತಾ ಜಿ. ಸಾಗರ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಈ ಕುರಿತು ಉಪನ್ಯಾಸ ನೀಡಲಿದ್ದಾರೆ.ಾಧ್ಯಾಪಕಿ ಮಮತಾ ಜಿ. ಸಾಗರ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಈ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪ್ರಮುಖಉಪನ್ಯಾಸಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಇದ್ದು,ಕೊಂಕಣಿಯೇತರ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ. ಶನಿವಾರ ಸಂಜೆ 5.30 ಕ್ಕೆ ಖ್ಯಾತ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಳೆಯವರ ಅಧ್ಯಕ್ಷತೆಯಲ್ಲಿಸಮಕಾಲೀನ ಬರಹಗಾರಿಗೆ ಸವಾಲುಗಳು ಈ ವಿಷಯದ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಪರಿಸಂವಾದ ನಡೆಯಲಿದ್ದು, ಉದಯನ್ ವಾಜಪೇಯಿ ಮತ್ತು ಪ್ರಮುಖಉಪನ್ಯಾಸಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಇದ್ದು,ಕೊಂಕಣಿಯೇತರ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ. ಶನಿವಾರ ಸಂಜೆ 5.30 ಕ್ಕೆ ಖ್ಯಾತ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಳೆಯವರ ಅಧ್ಯಕ್ಷತೆಯಲ್ಲಿಸಮಕಾಲೀನ ಬರಹಗಾರಿಗೆ ಸವಾಲುಗಳು ಈ ವಿಷಯದ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಪರಿಸಂವಾದ ನಡೆಯಲಿದ್ದು, ಉದಯನ್ ವಾಜಪೇಯಿ ಮತ್ತುಮಮತಾ ಜಿ. ಸಾಗರ ವಿಚಾರ ಮಂಡನೆ ಮಾಡಲಿದ್ದಾರೆ.

ಕರ್ನಾಟಕದಬೇರೆಬೇರೆಪ್ರದೇಶಗಳಿಂದ ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ದೆಹಲಿಯಿಂದಲೂ ಸುಮಾರು 600 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆ ಮತ್ತು ಸೊಗಡನ್ನು ಸವಿಯಲು 25 ನೇ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನ ಕರಾವಳಿಯ ಸಾಹಿತ್ಯಾಸಕ್ತರಿಗೆ ಅವಕಾಶ ಕಲ್ಪಿಸಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಳ್ಳುವವರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಹೇಮಾ ನಾಯ್ಕ್: ವಿದ್ಯಾರ್ಥಿ ಜೀವನದಲ್ಲೇ ಬರವಣಿಗೆ ಮತ್ತು ಕೊಂಕಣಿ ಚಳುವಳಿಗೆ ದುಮುಕಿದ ಶ್ರೀಮತಿ ಹೇಮಾ ನಾಯ್ಕ್ ಕೊಂಕಣಿ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಕತೆ, ಕಾದಂಬರಿ, ರೇಡಿಯೊ ನಾಟಕಗಳನ್ನು ರಚಿಸಿರುವ ಅವರು ಸಂಪಾದಕಿಮತ್ತುಪ್ರಕಾಶಕಿಯಾಗಿಯೂ ಸೇವೆನೀಡಿದ್ದಾರೆ. ಈ ವರೆಗೆ 8 ಸ್ವತಂತ್ರ ಪುಸ್ತಕಗಳನ್ನು ಪ್ರಕಟಿಸಿರುವ ಹೇಮಾ ನಾಯ್ಕ್, 10 ಕ್ಕೂ ಜಾಸ್ತಿ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ.

ಮಹಿಳಾ ಪರ ಸಂಘಟನೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಹೇಮಾ ನಾಯ್ಕ್, ದೂರದರ್ಶನ ವಾಹಿನಿಗಾಗಿ ಕೊಂಕಣಿ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ ಹೊಸ ದೆಹಲಿಯ ಸಾಹಿತ್ಯ ಅಕಾಡೆಮಿ, ಗೋವಾ ಸರಕಾರದ ಕಲಾ ಅಕಾಡೆಮಿ, ಭಾಷಾ ಮಂಡಳ್ ಗೋವಾ, ಕಥಾ, ಮಣಿಪಾಲದ ಡಾ| ಟಿ. ಎಂ. ಪೈ. ಪೌಂಡೇಶನ್ ಹೀಗೆ ಹತ್ತಾರು ಪ್ರಶಸ್ತಿ - ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಹೇಮಾ ನಾಯ್ಕ್ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷರಾಗಿಕಾರ್ಯನಿರ್ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನಳದ ಸ್ವಾಗತ ಸಮಿತಿಯ ಅಧ್ಯಕ್ಷರು ಶ್ರೀ ಮೈಕಲ್ ಡಿ ಸೊಜಾ, ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರು ಶ್ರೀ ನಂದಗೋಪಾಲ ಶೆಣೈ, ಅಖಿಲ ಭಾರತೀಯ ಕೊಂಕಣಿ ಪರಿಷದ್'ನ ಉಪಾಧ್ಯಕ್ಷರು ಮೆಲ್ವಿನ್ ರೊಡ್ರಿಗಸ್, ಅಖಿಲ ಭಾರತೀಯ ಕೊಂಕಣಿ ಪರಿಷದ್ ಕಾರ್ಯಾಧ್ಯಕ್ಷರು ಶ್ರೀ ಚೇತನ್ ಆಚಾರ್ಯ, ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಶ್ರೀ ಟೈಟಸ್ ನೊರೊನ್ಹಾ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಧ್ಯಕ್ಷರು ಶ್ರಿ ಎಚ್. ಎಮ್. ಪೆರ್ನಾಲ್ ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.