logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪರಶುರಾಮ ಥೀಮ್‌ ಪಾರ್ಕ್‌ ನ ಉದ್ಘಾಟನೆಯ ಪೂರ್ವಭಾವಿ ತಯಾರಿಗಳು ಹೀಗಿವೆ ನೋಡಿ

ಟ್ರೆಂಡಿಂಗ್
share whatsappshare facebookshare telegram
9 Jan 2023
post image

ಕಾರ್ಕಳ: ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣ ಗೊಂಡಿರುವ ಪರಶುರಾಮ ಥೀಮ್‌ ಪಾರ್ಕ್‌ ನ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಅದರ ಪ್ರಕಾರವಾಗಿ ಜ. 11 ರಿಂದ 13ರವರೆಗೆ ಕಾರ್ಕಳ ಹೆಬ್ರಿ ಉಭಯ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಪೂರ್ವಸಿದ್ಧತಾ ಸಭೆ ನಡೆಯಬೇಕು ಹಾಗೂ ಪ್ರತಿ ದಿನ ಮೂರು ಕಡೆಗಳಲ್ಲಿ ಸಂಜೆ 4 ಗಂಟೆಯ ನಂತರ ಈ ಸಭೆಗಳು ನಡೆಯಲಿದೆ. ಕಾರ್ಯಾಲಯ ಉದ್ಘಾಟನೆ: ಜ.18 ರಂದು ಬೆಳಿಗ್ಗೆ 10 ಗಂಟೆಗೆ ಪರಶುರಾಮ ಥೀಮ್ ಪಾರ್ಕ್‌ನ ಕೆಳಭಾಗದಲ್ಲಿ ನಿರ್ಮಾಣವಾಗಿರುವ ಕಾರ್ಯಾಲಯದ ಉದ್ಘಾಟನೆ.

ಮನೆ ಮನೆಗೂ ಆಹ್ವಾನ ಪತ್ರಿಕೆ: ಜ. 21 ಮತ್ತು 22 ರಂದು ಕಾರ್ಕಳ ತಾಲೂಕಿನಾದ್ಯಂತ ಏಕಕಾಲದಲ್ಲಿ ಮನೆ ಮನೆಗೆ ಥೀಮ್ ಪಾರ್ಕ್ ಉದ್ಘಾಟನೆಯ ಆಹ್ವಾನ ಪತ್ರಿಕೆ ತಲುಪಿಸಲಾಗುತ್ತದೆ.

ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ:ವಿವಿಧ ತಂಡಗಳ ಮೂಲಕ ಜ. 22 ರಂದು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಕುಕ್ಕುಂದೂರಿನಿಂದ ಗುಡ್ಡೆಯಂಗಡಿಯವರೆಗೆ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಜ. 27 ರಿಂದ 29 ರವರೆಗೆ ನಡೆಯುವ ಪರಶುರಾಮ್‌ ಥೀಮ್ ಪಾರ್ಕ್ ಉದ್ಘಾಟನೆ ಮತ್ತು ಸೃಷ್ಟಿಕರ್ತನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎರಡು ವೇದಿಕೆ ನಿರ್ಮಾಣ ಮಾಡಲಾಗುತಿದೆ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಒಂದು ವೇದಿಕೆಯ ನಿರ್ಮಾಣ ಮಾಡಲಾಗುತ್ತಿದ್ದು ಸಂಜೆ ಗಂಟೆ 5 ರಿಂದ 6 ಸಭಾ ಕಾರ್ಯಕ್ರಮ, 6 ರಿಂದ 10ಗಂಟೆಯ ವರೆಗೆ ಥೀಮ್‌ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೈಲೂರು ಮೈದಾನದಲ್ಲಿ ಮತ್ತೊಂದು ವೇದಿಕೆ ನಿರ್ಮಾಣವಾಗಲಿದ್ದು ಇಲ್ಲಿ 3 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಮತ್ತು ಜ. 24 ರಿಂದ ವಸ್ತುಪ್ರದರ್ಶನ ಮತ್ತು ಆಹಾರಮೇಳ ಜರುಗಲಿದೆ. ಬೃಹತ್ ಮೆರವಣಿಗೆ: ಜ. 27 ರಂದು ಪರಶುರಾಮನ ಕಂಚಿನ ಪ್ರತಿಮೆ ಲೋಕಾರ್ಪಣೆ ಮತ್ತು 28 ರಂದು ಭಜನಾ ಮಂದಿರದ ಉದ್ಘಾಟನೆ ನಡೆಯಲಿದ್ದು, ಸಂಜೆ 3 ಗಂಟೆಗೆ 250 ಕ್ಕೂ ಅಧಿಕ ಭಜನಾ ಮಂಡಳಿಗಳಿಂದ ಪಳ್ಳಿ ಕ್ರಾಸ್‌ನಿಂದ ಥೀಮ್ ಪಾರ್ಕ್‌ನವರೆಗೆ ಬೃಹತ್ ಭಜನಾ ಮೆರವಣಿಗೆ ಜರುಗಲಿದೆ. ಜನವರಿ 30 ರಂದು ಪೊಲೀಸ್ ಪರೇಡ್ - ಪಂಜಿನ ಕವಾಯತು: ಮೈಸೂರು ದಸರಾದಲ್ಲಿ ನಡೆಯುವ ವೈಭವದ ಪಂಜಿನ ಕವಾಯತಿನಂತೆ ಜ. 30ರಂದು ಸ್ವರಾಜ್ ಮೈದಾನದಲ್ಲಿ ಪೊಲೀಸ್ ಪರೇಡ್ - ಪಂಜಿನ ಕವಾಯತು ನಡೆಯಲಿದೆ. ಈ ಕುರಿತು ಕಾರ್ಕಳದ ಪೊಲೀಸ್ ತಂಡ ಪೂರ್ವತಯಾರಿ ನಡೆಸುತ್ತಿದೆ.

28 ಸಮಿತಿಗಳ ರಚನೆ: ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಅಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಒಳಗೊಂಡು ಕಾರ್ಯಾಲಯ, ಮನೆ ಮನೆ ಸಂಪರ್ಕ, ಅಧಿಕಾರಿಗಳ ಸಂಪರ್ಕ, ಭಜನಾ ಸಂಪರ್ಕ, ಗಣ್ಯರ ಸಂಪರ್ಕ, ವಸತಿ, ಊಟೋಪಚಾರ, ವಸ್ತುಪ್ರದರ್ಶನ, ನಿರ್ಮಾಣ, ಆಹಾರ ಮೇಳ, ಅಲಂಕಾರ, ವಾಹನ ಪಾರ್ಕಿಂಗ್, ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದಿಕೆ, ಪರಶುರಾಮ ಥೀಮ್ ಪಾರ್ಕ್ ಆವರಣ, ಕುಡಿಯುವ ನೀರು, ಸ್ವಚ್ಛತೆ, ಮಾಧ್ಯಮ, ಪ್ರಚಾರ, ಸೋಶಿಯಲ್ ಮೀಡಿಯಾ, ಮುದ್ರಣ, ಬ್ಯಾನರ್ ಮತ್ತು ಪ್ಲೆಕ್ಸ್, ಮೆರವಣಿಗೆ ಹೀಗೆ 28 ಸಮಿತಿಗಳನ್ನು ರಚಿಸಲಾಗುತ್ತಿದೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.