logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹಿಜಾಬ್ ಕೇಸರಿ ವಿವಾದ! ಹೈ ಕೋರ್ಟ್ ನಲ್ಲಿ ಏನೆಲ್ಲಾ ವಿಚಾರಣೆ ನಡೆಯಿತು ಇಲ್ಲಿದೆ ಸಂಪೂರ್ಣ ಡಿಟೈಲ್ಸ್ !

ಟ್ರೆಂಡಿಂಗ್
share whatsappshare facebookshare telegram
8 Feb 2022
post image

ಬೆಂಗಳೂರು : ವಿಚಾರಣೆ ವೇಳೆ ವಿವಾದ ಸಂಬಂಧ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರವನ್ನು ನಿರ್ಧರಿಸಲು ನಾವು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ. ಹಿಜಾಬ್ ಪರ ವಾದ ಮಂಡನೆ ಮಾಡಿದ ಹಿರಿಯ ದೇವದತ್ತ ಕಾಮತ್ ಅವರು, ಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗವಾಗಿದೆ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಮದ್ರಾಸ್, ಬಾಂಬೆ ಮತ್ತು ಕೇರಳ ಕೋರ್ಟ್ ಗಳು ಇಂಥಹ ಸಮಸ್ಯೆಯನ್ನು ನಿಭಾಯಿಸುವುದಿಲ್ಲ. ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ. ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಅಂಶವಾಗಿದೆ. ಇದನ್ನು ಸಂವಿಧಾನ 21ನೇ ವಿಧಿಯಲ್ಲಿ ಈ ಮೂಲಕ ಖಾಸಗಿತನವನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಜಾತ್ಯಾತೀತ ಭಾವನೆ ಒಂದು ಧರ್ಮಕ್ಕೆ ಯಾವುದು ಮೂಲಭೂತ ಎಂದು ಹೇಳಲು ಆಗಲ್ಲ. ವಯಸ್ಕಳಾದ ಬಳಿಕ ಅಪರಿಚಿತರಿಗೆ ಮುಖ ಮತ್ತು ಕೈ ತೋರಿಸುವಂತಿಲ್ಲ ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ಅದಕ್ಕೆ ಹಿಜಾಬ್ ಧರಿಸೋದು. ಇದು ಸಹ ನಮ್ಮ ಮೂಲಭೂತ ಹಕ್ಕು. ಮುಖ ಬಿಟ್ಟು ದೇಹ ತೋರಿಸೋದು ನಿಷಿದ್ಧ. ಹಿಜಾಬ್ ಮೂಲಭೂತ ಹಕ್ಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ಸಿಬಿಎಸ್ ಇ ಸಹ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಹಾಗಾಗಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದರು.

ಬಳಿಕ ನ್ಯಾಯಾಲಯವು ನಾವು ಬುರ್ಖಾ ಬಗ್ಗೆ ಮಾತನಾಡುತ್ತಿಲ್ಲ. ಹಿಜಾಬ್ ಧರಿಸೋದು ಮೂಲಭೂತ ಹಕ್ಕು. ಹಿಜಾಬ್ ಧರಿಸೋದು ಖಾಸಗೀತನದ ಹಕ್ಕು ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸರ್ಕಾರ ಆದೇಶ ವ್ಯಾಪ್ತಿಗೆ ಮೀರಿದ್ದು. ವಸ್ತ್ರ ಸಂಹಿತೆ ಸಂಬಂಧ ಸರ್ಕಾರ ಸ್ಪಷ್ಟವಾದ ಆದೇಶವನ್ನು ನೀಡಿಲ್ಲ. ಇಲ್ಲಿಯವರೆಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಅಭಿಪ್ರಾಯ ವ್ಯಕ್ತಪಡಿಸಿತು.

ಈ ವೇಳೆ ನ್ಯಾಯಾಧೀಶರು ಖುರಾನ್ ಪ್ರತಿಯನ್ನು ತರಿಸಿಕೊಂಡು ಗಮನಿಸಿದರು. ಖುರಾನ್ ನಲ್ಲಿ ಮಹಿಳೆಯರು ಧರಿಸಿರುವ ಉಡುಪಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಖುರಾನ್ ನಲ್ಲಿಯೇ ಎಲ್ಲವೂ ಮೂಲಭೂತ ಆಚರಣೆಗಳೇನಾ? ಇವುಗಳ ವ್ಯಾಪ್ತಿ ಏನು? ಹಿಜಾಬ್ ಬಗ್ಗೆ ಖುರಾನ್ ನಲ್ಲಿರುವ ಮಾಹಿತಿ ಓದಿ ಎಂದು ವಕೀಲರಿಗೆ ಸೂಚಿಸಿದರು.

ಸರ್ಕಾರಗಳು ಆದೇಶ ಹೊರಡಿಸಬಹುದು. ನಾಗರೀಕರು ಪ್ರಶ್ನೆ ಮಾಡಹುದು. ಆದೇಶವನ್ನು ನೀಡುವಂತಿಲ್ಲ ಎಂದು ಹೇಳುವಂತಿಲ್ಲ. ಸರ್ಕಾರ ಸಂವಿಧಾನದ ಒಂದು ಭಾಗ. ಸರ್ಕಾರಗಳ ಊಹೆಗಳ ಮೇಲೆ ನಿರ್ಧಾರಕ್ಕೆ ಬರಲು ಅಗಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವೇಳೆ ಕೇರಳ ಹೈಕೋರ್ಟ್ ಮುಂದಿಟ್ಟ ನ್ಯಾಯಾಲಯ ಕೈ ಮತ್ತು ಮುಖ ಅಪರಿಚಿತರಿಗೆ ತೋರಿಸಬಹುದು ಎಂದು ಹೇಳಿದೆಯಲ್ಲ. ಹಾಗಾದ್ರೆ ಹಿಜಾಬ್ ಯಾಕೆ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನೆ ಮಾಡಿದರು.

ಬಳಿಕ ವಾದಗಳ ಆಲಿಸಿದ ನ್ಯಾಯಾಲಯವು ಈಗಷ್ಟೇ ಮುಂದುವರೆಸಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.