



ಕಾರ್ಕಳ : ಡಿ.೧೨ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಹಿಂದೂ ಸಂಗಮ,ಹಾಗು ಬೃಹತ್ ಶೋಭಯಾತ್ರೆ ನಡೆಯಲಿದೆ ಎಂದು ಸುನೀಲ್ ಕೆ.ಆರ್ ತಿಳಿಸಿದರು. ಕಾರ್ಕಳದ ಹಿಂದೂ ಸಂಗಮ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿAದ ದತ್ತಜಯಂತಿಯ ಅಂಗವಾಗಿ ಡಿ.೧೨ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಹಿಂದೂ ಸಂಗಮದಲ್ಲಿ ಸುಮಾರು ೨೫ಸಾವಿರ ಮಂದಿ ಹಿಂದೂಭಾAದವರು ಸೇರುವ ನಿರೀಕ್ಷೆಯಿದೆ. ಸ್ವರಾಜ್ಯ ಮೈದಾನದಿಂದ ಗಾಂಧಿ ಮೈದಾನದವರೆಗೆ ಭಜನಾ ತಂಡ, ವಿವಿಧ ಟ್ಯಾಬ್ಲೋಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ಹೇಳಿದರು .ಸಭೆಯನ್ನು ಉದ್ದೇಶಿಸಿ ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣ ಮಾಡಲಿದ್ದು, ಪೇಜಾವರ ಸ್ವಾಮೀಜಿಯವರು ಹಾಗೂ ಆನೆಗುಂದಿ ಮಹಾಸಂಸ್ಥಾನದ ಕಾಳ ಹಸ್ತೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ಮತ್ತು ಜಾಗೃತಿಗಾಗಿ, ಪೂರ್ವಭಾವಿಯಾಗಿ ಧರ್ಮರಕ್ಷ ರಥ ತಾಲೂಕಿನಾದ್ಯಂತ ಗ್ರಾಮ ಗ್ರಾಮಗಳಿಗೆ ಸಂಚರಿಸುತ್ತಿದ್ದು, ಡಿ ೫ರಂದು ಕಾರ್ಕಳ ನಗರಕ್ಕೆ ಪ್ರವೇಶ ಮಾಡಲಿದೆ ಎಂದು ಸುನಿಲ್ ಕೆ.ಆರ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹಿಂದೂಭಾAದವರು ಭಾಗವಹಿಸಿ ಹಿಂದೂ ಸಮಾಜದಲ್ಲಿ ವಿಶ್ವಾಸವನ್ನು ತುಂಬಿಸುವ ಕೆಲಸ ಮತ್ತು ಜಾಗೃತ, ಸ್ವಾಭಿಮಾನ ಹಿಂದೂ ಸಮಾಜದ ನಿರ್ಮಾಣವಾಗುವಂತಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಹೇಳಿದರುಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ. ತಾಲೂಕು ಕಾರ್ಯದರ್ಶಿ ಸುಧೀರ್ ನಿಟ್ಟೆ, ಕಾರ್ಕಳ ಬಜರಂಗದಳ ಸಂಚಾಲಕ ಚೇತನ್ ಪೇರಾಲ್ಕೆ, ವಿ.ಹಿಂ.ಪ. ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಹರಿಪ್ರಸಾದ್ ಶೆಟ್ಟಿ ಮತ್ತಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.