



ಹಿರಿಯಡಕ: ಉಡುಪಿ ಜಿಲ್ಲೆಯ ಹಿರಿಯಡಕ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಹೋಗುತ್ತಿರುವಾಗ ನಾಯಿ ಅಡ್ಡ ಬಂದ ಕಾರಣ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಮಂಜುನಾಥ್ ಎಂದು ತಿಳಿದು ಬಂದಿದೆ. ಈ ಘಟನೆ ಸ್ಥಳಕ್ಕೆ ಹಿರಿಯಡಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ: ದಿನಾಂಕ: 07/01/2024 ರಂದು ಸಂಜೆ 6:15 ಗಂಟೆ ಸಮಯಕ್ಕೆ ಶ್ರೀಮತಿ ಸವಿತಾ ರವರ ಗಂಡ ಮಂಜುನಾಥ್ (41 ವರ್ಷ) ಕಣಜಾರು ಗ್ರಾಮದ ಸಾಗು ಗುಡ್ಡೆಅಂಗಡಿ-ಕಣಜಾರು ರಸ್ತೆಯಲ್ಲಿ ಗುಡ್ಡೆಅಂಗಡಿಯಿಂದ ಕಣಜಾರು ಕಡೆಗೆ KA 20 EV 7336 ನೇ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲ್‌ಗೆ ನಾಯಿ ಅಡ್ಡಬಂದ ಕಾರಣ ಅದನ್ನು ತಪ್ಪಿಸಲು ಹೋದಾಗ ಮಂಜುನಾಥ್ ರವರು ಮೋಟಾರ್ ಸೈಕಲನ್ನು ನಿಯಂತ್ರಣ ಮಾಡಲಾಗದೇ ಮೋಟಾರ್ ಸೈಕಲ್ ರಸ್ತೆಯ ಬಲಬದಿಯ ಚರಂಡಿಗೆ ಹೋಗಿ ಬಿದ್ದು ಮಂಜುನಾಥ್ ರವರ ತಲೆ ರಸ್ತೆ ಬದಿಯ ಮರಕ್ಕೆ ಮತ್ತು ಚರಂಡಿ ಬದಿಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.