logo
WhatsApp Image 2026-04-02 at 14.46.04.jpeg
hindalco everlast.jpeg

ಹಿರಿಯಡಕ: ಬೆಂಕಿ‌ ಅವಘಡದಿಂದ ಮನನೊಂದ ವ್ಯಕ್ತಿ‌ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
13 Dec 2022
post image

ಹಿರಿಯಡಕ: ಮನೆಯಲ್ಲಿ ನಡೆದ ಬೆಂಕಿ ಅವಘಡದಿಂದ ಚಿಂತೆಗೀಡಾಗಿದ್ದ ವ್ಯಕ್ತಿಯೊಬ್ಬರು ಮನನೊಂದು‌ ಆತ್ಮಹತ್ಯೆಗೆ ಶರಣಾದ ಘಟನೆ ಬೊಮ್ಮರಬೆಟ್ಟು ಗ್ರಾಮದ ಕೊಲ್ಯಾರು‌ ಎಂಬಲ್ಲಿ‌ ನಡೆದಿದೆ. ಬೊಮ್ಮರಬೆಟ್ಟು ಗ್ರಾಮದ ಕೊಲ್ಯಾರು‌ ನಿವಾಸಿ 59ವರ್ಷದ ಶಾಂತೇಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಡಿ.9ರಂದು ಇವರ ಮನೆಯ ಬಳಿಯ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗಿತ್ತು. ಇದರಿಂದ ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ ಹಾಗೂ ಬೈಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವಿಚಾರದಲ್ಲಿ ಮಾನಸಿಕವಾಗಿ ನೊಂದ ಶಾಂತೇಶ್ ಶೆಟ್ಟಿ ಅವರು ಡಿ. 11ರ ರಾತ್ರಿ 10‌ಗಂಟೆಯಿಂದ ಡಿ. 12ರ‌ ಬೆಳಿಗ್ಗಿನ ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯಲ್ಲಿರುವ ಹಲಸಿನ ಮರದ ಕೊಂಬೆಗೆ‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.