



ಹಿರಿಯಡ್ಕ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರುಗಳಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ. ಇದೀಗ ಬೇರೆ ಬೇರೆ ಸಂಸ್ಥೆ ಗಳಿಗೆ ವರ್ಗಾವಣೆಗೊಳ್ಳುತ್ತಿರುವ ಉಪನ್ಯಾಸಕರುಗಳಾದ ದೈಹಿಕ ಶಿಕ್ಷಕಿ ಶ್ರೀಮತಿ ಸವಿತಾ, ಶ್ರೀ ವಿಶ್ವೇಶ್ವರ ಗಾವಂಕರ್, ಪ್ರಾಂಶುಪಾಲೆ ಶ್ರೀಮತಿ ನಿಕೇತನ ಇವರನ್ನ ಗೌರವದಿಂದ ಬೀಳ್ಕೊಡುವ ಕಾರ್ಯಕ್ರಮವನ್ನು ಕಾಲೇಜುನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಇಂದು ನಡೆಯಿತು .
ಮುಖ್ಯ ಅತಿಥಿಗಳಾಗಿ ಡಾ. ಪಾದೆಕಲ್ಲು ವಿಷ್ಣುಭಟ್, ಸಭಾಧ್ಯಕ್ಷರಾಗಿ ಪ್ರಸ್ತುತ ಪ್ರಾಂಶುಪಾಲರು ಡಾ. ಸೀಮಾ ಜಿ. ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸುರೇಶ ನಾಯ್ಕ್, ಕಾಲೇಜು ವಿದ್ಯಾರ್ಥಿ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂದೇಶ್ ಟಿವಿ ಪೆರ್ಡೂರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಾದ ಗೌರವಧ್ಯಕ್ಷ ಅಶೋಕ್ ಆಚಾರ್ಯ, ಶ್ರೀಪತಿ, ನಿಶ್ಮಿತಾ, ಅಶೋಕ್, ಶಿವಾನಂದ್, ಪ್ರಶಾಂತ್, ಸುಶಾಂತ್, ದಿನೇಶ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.