



ಹಿರಿಯಡ್ಕ: ಬೆಳಗಾವಿ ತಾಲೂಕಿನ ಮಾಂತೇಶ ಶಿವಲಿಂಗಪ್ಪ ಅಂಗಡಿ (50) ಎಂಬವರ ಮಗ ಉಮೇಶ (29) ಕಳೆದ 8 ವರ್ಷಗಳಿಂದ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಜ್ಯುನಿಯರ್ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು ಕೆಲಸ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಹರಿದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಡಿ.22 ರಂದು ಸಹೋದ್ಯೋಗಿ ರಮೇಶ ಎನ್ ಆರ್ ಕರೆ ಮಾಡಿ ಹಿರಿಯಡ್ಕದ ಗುಡ್ಡೆಯಂಗಡಿಯ ಕೈರಾಳಿ ಬಳಿ ವಿದ್ಯುತ್ ಪರಿವರ್ತಕದಲ್ಲಿ ಉಂಟಾಗಿದ್ದು ಬರಲು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ- ಕೈರಾಳಿ ನಾಗಬನದ ಬಳಿ ವಿದ್ಯುತ್ ಪರಿವರ್ತಕದಲ್ಲಿ ತೊಂದರೆ ಉಂಟಾಗಿದ್ದು ರಮೇಶ್ ಪರಿವರ್ತಕ ಹತ್ತಿ ರಿಪೇರಿ ಮಾಡಿದ್ದು, ನಂತರ ಉಮೇಶ್ ಪರಿವರ್ತಕದಲ್ಲಿ ಫ್ಯೂಜ್ ಹಾಕಲು ಪರಿವರ್ತಕವನ್ನು ಹತ್ತಿದಾಗ ಅಕಸ್ಮಾತ್ ಲೈನ್ ನಿಂದ ವಿದ್ಯುತ್ ಆತನ ಬಲಕೈಗೆ ಹರಿದು ಮೇಲಿನಿಂದ ತಲೆ ಕೆಳಗಾಗಿ ಬಿದ್ದಿದ್ದು ರಮೇಶ್ ತಕ್ಷಣವೇ ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೊನೆಯುಸರೆಳೆದಿದ್ದಾರೆ.
ಈ ಮಧ್ಯೆ ಉಮೇಶ್ ತಂದೆಗೆ ಕರೆ ಮಾಡಿ ಬೇಗನೆ ಹೊರಟು ಬರುವಂತೆ ರಮೇಶ್ ತಿಳಿಸಿದ್ದು ಶಿವಲಿಂಗಪ್ಪ ಬರುವಷ್ಟರಲ್ಲಿ ಮಗ ಕೊನೆಯುಸರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಶಿವಲಿಂಗಪ್ಪನವರು ಹಿರಿಯಡ್ಕ ಠಾಣೆಯ ದೂರು ನೀಡಿದ್ದು, ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.