logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ನಿತಿನ್ "ರವರ ಕನಸಿನ ದಾರಿಗೆ "ಚರಿತ್ರೆ"ಯ ಹೊಂಬೆಳಕು..! ...

ಟ್ರೆಂಡಿಂಗ್
share whatsappshare facebookshare telegram
3 Jan 2023
post image

"

"ಕಷ್ಟಗಳು ಬಂದಿವೆ ಎಂದು ಕಂಡ ಕನಸನ್ನು ಬಿಡಬಾರದು. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಾಗಿರಬಹುದು.ಆದರೆ ಮುಂದೊಂದು ದಿನ ಎಲ್ಲವೂ ಸುಖಮಯವಾಗಿರುತ್ತೆ."

ಪುಟ್ಟ ಹಕ್ಕಿಯೊಂದು ಕಂಡಿದ್ದು ಹಾರುವ ಕನಸಲ್ಲ.ತನ್ನ ಧ್ವನಿಯಲ್ಲೇ ಆಕಾಶದೆತ್ತರಕ್ಕೂ ರುಜುಮಾಡಬೇಕೆಂದು. ಊಟಕ್ಕೂ ಹಣವಿಲ್ಲದೆ, ಹಸಿವಿನಿಂದ ಸಿಲಿಕಾನ್ ಸಿಟಿಯ ಬಸ್ಸ್ಟ್ಯಾಂಡ್ ಒಂದರಲ್ಲಿ ಕೂರುತ್ತಾ "ನನ್ನಿಂದ ಏನೂ ಸಾಧ್ಯವಿಲ್ಲ "ಎಂದು ಕಣ್ಣೀರು ಸುರಿಸಿದ್ದಲ್ಲ. ಹೊಸಹೆಜ್ಜೆಗಳ ಸವೆಯಲು ದಾರಿ ಸೃಷ್ಟಿಸಿದ್ದು. ಅದೆಷ್ಟು ಬಾರಿ ತನ್ನಿಷ್ಟದ ನಿರೂಪಣೆಗಾಗಿ ವೇದಿಕೆಗಾಗಿ ಪರದಾಡಿ ಎಲ್ಲರಿಂದಲೂ ತಿರಸ್ಕಾರಗೊಂಡರೂ ಕುಗ್ಗಿದ್ದಲ್ಲ. ಅದೇ ಧ್ವನಿಗಾಗಿ ತಾನೇ "ಚರಿತ್ರೆ " ಎಂಬ ಅಸ್ತ್ರವನ್ನು ಜ್ಞಾನದ ಬತ್ತಳಿಕೆಯಲ್ಲಿ ಇರಿಸಿ, ಅನುದಿನ ಪ್ರಯತ್ನವೆಂಬ ದೀಪದಿಂದ ಆರಾಧಿಸಿ ಸತತ ಮೂರು ವರ್ಷಗಳ ನಿರಂತರ ತಪಸ್ಸಿನ ಫಲವಾಗಿ " ಚರಿತ್ರೆ " ಎಂಬ ಯುಟ್ಯೂಬ್ ಚಾನೆಲ್ ಮೂಲಕ ತನ್ನ ಧ್ವನಿಯಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದವರು " ನಿತಿನ್ ಪೂಜಾರಿ ಶಿರ್ಲಾಲ್ " ಇವರು.

ಶ್ರೀ ಮನೋಹರ್ ಪೂಜಾರಿ ಮತ್ತು ಪ್ರಭಾವತಿ ಇವರ ಪುತ್ರರಾಗಿ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಶಿರ್ಲಾಲ್ ನಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ಪ್ರತಿಭಾನ್ವಿತರು. ನಾಟಕ, ಭಾಷಣ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಎತ್ತಿದ ಕೈ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂಡಾರ್ ಹಾಗೂ ಶಿರ್ಲಾಲ್ ನಲ್ಲಿ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದ ಬೋರ್ಡ್ ಹೈಸ್ಕೂಲ್ನಲ್ಲಿ ಮತ್ತು ಬಿ. ಎಸ್. ಸಿ ಪದವಿಯನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿ ಮುಗಿಸಿದರು.

ತನ್ನಿಷ್ಟದ "ಪತ್ರಿಕೋದ್ಯಮ" ವನ್ನು ಕಲಿಯಬೇಕು ಎಂಬ ಕನಸಿದ್ದರು ತಾನೇ ರಜಾದಿನಗಳಲ್ಲಿ ಹಗಲಿರುಳು ಗಾರೆಕೆಲಸ ಮಾಡಿ ಸಂಪಾದಿಸಿದ ಹಣದಿಂದ ಕಾಲೇಜಿನ ಶುಲ್ಕ ತೀರಿಸಲು ಸಾಧ್ಯವಾಗದೆ ಬಿ. ಎಸ್. ಸಿ ಗೆ ಸೇರಿದರೂ "ಗುರಿಯೊಂದೇ ನಿರೂಪಕನಾಗುವುದು." ಅಂದಿನಿಂದಲೇ ವಿಭಿನ್ನ ಶೈಲಿಯಲ್ಲಿ ತನ್ನದೇ ಸಾಲುಗಳಿಗೆ ಧ್ವನಿಯಾಗಲು ಮೊದಲ ಹೆಜ್ಜೆ ಇಟ್ಟರು. 2015-16 ರಲ್ಲಿ "ಕರಾವಳಿ ಕನ್ನಡ " ದಲ್ಲಿ ದುಡಿಯುತ್ತಾರೆ. ನಂತರ ಮಂಗಳೂರಿನ "tv7" ಚಾನೆಲ್ನಲ್ಲಿ ಸಂದರ್ಶನಕ್ಕೆ ತೆರಳುತ್ತಾರೆ. ಕನ್ನಡ ಟೈಪಿಂಗ್ ಬರದ ಕಾರಣ ಅವರನ್ನು ಮತ್ತೆ ನಿರಾಕರಿಸುತ್ತಾರೆ. ಆದರೂ ಹಠಬಿಡದೆ ಧ್ವನಿ ನೀಡಲು ಅವಕಾಶ ಕೇಳಿದಾಗ ಸಿಕ್ಕ ಒಂದು ಅವಕಾಶ ಮತ್ತೆ ಅವರನ್ನು ಛಲಬಿಡದೆ ಸ್ವರಲೋಕದಲ್ಲಿ ಸಂಚರಿಸಲು ಸ್ಫೂರ್ತಿ ತುಂಬುತ್ತದೆ.

ತಾನು ಯಾವುದರಲ್ಲಿ ದುರ್ಬಲ ಎಂದೆನಿಸುತ್ತೋ ಆ ಎಲ್ಲವನ್ನು ಹಗಲಿರುಳೆನ್ನದೆ ವಿದ್ಯೆಯನ್ನಾಗಿ ಸ್ವೀಕರಿಸಿ ತನ್ನನ್ನು ತಾನು ಹೊಸಬದುಕಿನ ಯುದ್ಧಕ್ಕೆ ಸಜ್ಜುಗೊಳಿಸುತ್ತಾರೆ.

ಹಳ್ಳಿಯ ಬದುಕನ್ನೇ ಸ್ವರ್ಗವೆನ್ನುತ್ತಾ ನೋವಲ್ಲು ನಲಿವನ್ನು ಕಾಣುತ್ತಾ,ತನ್ನವರು ತನಗಾಗಿ ಹೆಗಲುಕೊಡದಿದ್ದರೂ "ಎಲ್ಲರೂ ನನ್ನವರು" ಎಂಬ ಹೃದಯವಂತಿಕೆಯ ಹೊತ್ತು ಕನಸಿನ ಬೆನ್ನೇರಿ " ಬೆಂಗಳೂರು ತಲುಪಿ 2017-18 ರಲ್ಲಿ " ಸುದ್ದಿ ಟಿವಿ ಬೆಂಗಳೂರು " ಇಲ್ಲಿ ಜರ್ನಲಿಸ್ಟ್ ಆಗಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ.

ಕೈಗೆಟುಕದ ಸಂಭಾವನೆಯಿಂದ ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದಿದ್ದಾಗ ತನ್ನ ಕಷ್ಟ ಸಹೋದ್ಯೋಗಿಗಳಿಗೆ ತಿಳಿಯಬಾರದೆಂದು ಊಟದ ಸಮಯದಲ್ಲಿ ಬಸ್ಸ್ಟ್ಯಾಂಡ್ ನಲ್ಲಿ ಕುಳಿತು ಹಸಿವನ್ನು ಸಾಧನೆಯ ಬುತ್ತಿಗಾಗಿ ಕಾದಿರಿಸಿ ಮೌನವಾಗಿ ಮತ್ತೆ ಕೆಲಸ ಮುಂದುವರೆಸಿದ ಕ್ಷಣ ಎಂತವರನ್ನು ಒಂದು ಕ್ಷಣ ಭಾವುಕರರನ್ನಾಗಿ ಮಾಡುತ್ತದೆ.

ಸಾಧನೆ ಮಾಡಲು ಅಡಿಯಿಟ್ಟವನಿಗೆ ಬಡತನ, ಕಷ್ಟ, ಹಣ ಎಂದಿಗೂ ಅಡ್ಡಿಪಡಿಸಲಿಲ್ಲ . ಬದಲಾಗಿ ಕಠಿಣ ಶ್ರಮ, ಸತತ ಪ್ರಯತ್ನ, ನಿರಂತರ ಶ್ರದ್ಧೆಯ ಮೂಲಕವೇ ಜೀವನದಲ್ಲಿ ಯಶಸ್ಸಿನ ಬೆನ್ನತ್ತಿದರು.ಹೀಗಾಗಿ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನು ಧೈರ‍್ಯವಾಗಿ ಎದುರಿಸಿ, ಅವುಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆಯ ಕಡೆಗೆ ಮುಖಮಾಡಿದರು ನಮ್ಮ ನಿತಿನ್ ಪೂಜಾರಿ ಅವರು.

ಮುಂದೆ "ಪವರ್ ಟಿವಿ "ಯಲ್ಲಿ ದುಡಿಯುವ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಯಲ್ಲಿ ಕಾರ್ಯನಿರ್ವಹಿಸುತಿದ್ದ " ವಿನೋದ್ " ಅವರ ಪರಿಚಯವಾಗುತ್ತೆ. ಇಬ್ಬರು ಅಕ್ಕಪಕ್ಕದ ರೂಮ್ನಲ್ಲಿ ಇದ್ದುದ್ದರಿಂದ ಒಮ್ಮೆ "ವಿನೋದ್ " ರವರು ನಿತಿನ್ ಅವರ ಧ್ವನಿಯನ್ನು ಮೆಚ್ಚಿ ನಾವು ಯಾಕೆ ಒಂದು ಯುಟ್ಯೂಬ್ ಚಾನೆಲ್ ಮಾಡಬಾರದು? ಎನ್ನುತ ಹೊಸಹೆಜ್ಜೆಗೆ ನಾಂದಿ ಹಾಡುತ್ತಾರೆ. 2020 ರಲ್ಲಿ ಗೆಳೆಯರಿಬ್ಬರೂ ಸೇರಿ " ಚರಿತ್ರೆ " ಎಂಬ ಚಾನೆಲ್ ಮಾಡಿ ಅದರ ಮೂಲಕ ಕನ್ನಡದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಗತ್ತು ನಿಬ್ಬೆರಗಾಗುವ ಅದೆಷ್ಟೋ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ. ನಿತಿನ್ ತನ್ನೆಲ್ಲ ವಿಚಾರಧಾರೆಗೆ ಅಕ್ಷರಗಳನ್ನು ಪೋಣಿಸಿ ತಾನೇ ಧ್ವನಿಯಾದರೆ ವಿನೋದ್ ರವರು ವಿಭಿನ್ನ ಶೈಲಿಯಲ್ಲಿ ಸಂಕಲನ ನೀಡಿ ಜೀವ ತುಂಬುತ್ತಾರೆ. ಇವರಿಬ್ಬರ ಪರಿಶ್ರಮಕ್ಕೆ ಅದೇ ವರ್ಷದಲ್ಲಿ 2ಲಕ್ಷ ಚಂದಾದಾರರನ್ನು ಪಡೆಯುತ್ತಾರೆ. 2021 ರಲ್ಲಿ "ಚರಿತ್ರೆ" ಗೆ ದೇಶದ ಮೂಲೆಮೂಲೆಯಲ್ಲಿರುವ ಕನ್ನಡಿಗರು ಜಯಭೇರಿ ಕೂಗುತ್ತಾ ಆಗಲೇ ಮಿಲಿಯನ್ ನ ಗಡಿದಾಟಿಸಿ "ಯಶಸ್ಸು " ಎಂಬ ಮರೀಚಿಕೆಯನ್ನು ಕೊನೆಗೂ ಅನುಭವಿಸಲು ಅನುವುಮಾಡಿದ್ದರು. ಅದನ್ನೇ ಉದ್ಯೋಗವನ್ನಾಗಿ ಮುಂದುವರೆಸುತ್ತ ತಮ್ಮ ಊರುಗಳಲ್ಲೆ " ಚರಿತ್ರೆ ಕಛೇರಿ" ಯನ್ನು ಸ್ಥಾಪಿಸಿ ಹಗಲಿರುಳೆನ್ನದೆ ಕಾರ್ಯಪ್ರವೃತರಾದರು ಛಲಬಿಡದ ಯುವಕರು.

ಮುಂದೆ ನಿತಿನ್ ಹೊಸ ಹೊಸ ಪ್ರಯತ್ನ ಮುಂದುವರೆಸುತ್ತ "ಇನ್ಸ್ಟಾಗ್ರಾಮ್ " ನಲ್ಲಿ ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ಸ್ಫೂರ್ತಿದಾಯಕ ನುಡಿಗಳನ್ನು ಆಡುವ ವಿಡಿಯೋ ಮಾಡಿ ಹೊಸಭಾಷ್ಯ ಬರೆಯುತ್ತಾರೆ. ಅಲ್ಲೂ ಅವರು ತನ್ನ ಧ್ವನಿ ಜನರಿಗೆ ಇಷ್ಟವಾಗುತ್ತಿಲ್ಲವೊ ಎಂದು ಒಮ್ಮೆಯೂ ಕುಗ್ಗಲಿಲ್ಲ. ದಿನನಿತ್ಯ ತನ್ನ ಪಾಲಿನ ಕೆಲಸವನ್ನು ತೃಪ್ತಿಯಿಂದ ಮಾಡುತ್ತ ಹೋದರು.

ಅವರ ಸ್ಫೂರ್ತಿದಾಯಕ ಮಾತುಗಳಿಂದ ಬದುಕನ್ನು ಬದಲಾಯಿಸಿದವರೆಷ್ಟೋ, ಅವರನ್ನೇ ಆದರ್ಶವಾಗಿಟ್ಟುಕೊಂಡು ತಾವೇ ಧ್ವನಿಯಾಗುತ್ತ ಅಂತದ್ದೇ ಚಾನೆಲ್ ಗಳನ್ನು ಆರಂಭಿಸಿ ಯಶಸ್ಸಿನ ದಾರಿಹಿಡಿದವರೆಷ್ಟೋ..! ಏನೇ ಇರಲಿ. "ಆಕಾಶದೆಡೆಗೆ ನೋಡಿ, ಯಾರೂ ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತೆ ಎಂಬುದಕ್ಕೆ ನಿತಿನ್ ಪೂಜಾರಿ ಅವರ ಯಶೋಗಾಥೆ ಸತ್ಯ ನಿದರ್ಶನ!

"ಚರಿತ್ರೆ " ಯೂಟ್ಯೂಬ್ನಲ್ಲಿ ಇಂದು 1.07ಮಿಲಿಯನ್ ಚಂದಾದಾರರು, ಇನ್ಸ್ಟಾಗ್ರಾಮ್ ನಲ್ಲಿ 2.23 ಲಕ್ಷ ಅಭಿಮಾನಿಗಳು, ಮೋಜ್ ಆಪ್ ನಲ್ಲಿ 1.2 ಮಿಲಿಯನ್ ಅಭಿಮಾನಿಗಳಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು "ಪ್ರಯತ್ನ " ಎಂಬ "ಪಯಣ"ದಿಂದ ಅಷ್ಟೇ.. ಈ ಯಾನ ಬದುಕಿನುದ್ದಕ್ಕೂ ಸಾಗಲಿ. "ಬದುಕು ಕಡಲ ನಾವೆಯಲ್ಲಿ ಸಾಯುವವರೆಗೂ ಸಾಧಿಸಬೇಕೆನ್ನುವ ಹಂಬಲದ ನಿತಿನ್ ಪೂಜಾರಿ ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ. ಅದೆಷ್ಟೋ ದೊಡ್ಡ ವೇದಿಕೆಗಳು ಇವರ ಸಾಧನೆಯನ್ನು ಗೌರವಿಸಿ ಲೋಕಕ್ಕೆ ಸ್ಫೂರ್ತಿಯಾಗಲು ಅವಕಾಶ ನೀಡಲಿ.

#ಚೈತ್ರ_ಕಬ್ಬಿನಾಲೆ✍🏻✍🏻✍🏻

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.