



ಕಾರ್ಕಳ ಡಿ.10: ವಿದ್ಯಾರ್ಥಿಗಳೇ ಸಂಪನ್ಮೂಲ ವ್ಯಕ್ತಿಗಳಾಗಿ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿನ ಪ್ರಾಂಶುಪಾಲರು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ತಮ್ಮ ನಿಲುವಿನ ದೃಷ್ಟಿಕೋನದಲ್ಲಿ ಮಾನವ ಹಕ್ಕುಗಳ ವಿಚಾರಧರೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮನೀಶ್ ಕುಲಾಲ್, ಶಿಲ್ಪಾ (ಫೈನಲ್ ಎಂ. ಕಾಂ),ಅಜಿತ್ (ತೃತೀಯ ಬಿಬಿಎ),ಫಯಾನ ಬೇಗಂ (ದ್ವಿತೀಯ ಬಿಬಿಎ),ಕೀರ್ತನ್ (ಪ್ರಥಮ ಬಿಎ) ಮಾನವ ಹಕ್ಕುಗಳ ಬಗ್ಗೆ, ನಮ್ಮ ಹಕ್ಕುಗಳನ್ನು ನಾವು ಪಡೆದು ಕೊಳ್ಳಬೇಕು ಎಂದು ಹೇಳಿದರು. ನಮ್ಮ ಹಕ್ಕುಗಳ ಬಗ್ಗೆ ನಾವು ತಿಳಿದುಕೊಳ್ಳುವ ಜೊತೆಗೆ ಇತರರ ಹಕ್ಕು ಮತ್ತು ಕರ್ತವ್ಯಗಳನ್ನು ಗೌರವಿಸಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಕ್ಯೂಎಸಿ ಸಂಚಾಲಕಿ ಆಗಿರುವ ಪ್ರೋ. ಜ್ಯೋತಿ ಎಲ್ ಜನ್ನೆ ಮಾತನಾಡಿದರು. ಎನ್ ಎಸ್ ಎಸ್ ಘಟಕ ಹಾಗೂ ಮಾನವ ಹಕ್ಕುಗಳ ವ್ಯವಸ್ಥಾಪಕಿ ಪ್ರೋ. ಜ್ಯೋತಿ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಸ್ವಾಗತಿಸಿದರು. ವಿದ್ಯಾರ್ಥಿ ರಿಕಿತಾ ನಿರೂಪಿಸಿದರು. ಶ್ರೇಯ ಹೆಗ್ಡೆ ಕಾರ್ಯಕ್ರಮವನ್ನು ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.