logo
WhatsApp Image 2026-04-02 at 14.46.04.jpeg
hindalco everlast.jpeg

ಮನುಷತ್ವ ಸದಾ ನಮ್ಮ ಮನಸ್ಸಿನ ಭಾಗವಾಗಬೇಕು: ಡಾ ಮಂಜುನಾಥ ಕೋಟ್ಯಾನ್

ಟ್ರೆಂಡಿಂಗ್
share whatsappshare facebookshare telegram
19 Oct 2023
post image

ಮೂಡುಬಿದಿರೆ: ಸಂಘರ್ಷವಾಗದ ಅನುಸಂಧಾನದ ಬದುಕನ್ನು ರಾಷ್ಟ್ರಿಯ ಸೇವಾ ಯೋಜನೆಯು ಕಲಿಸುತ್ತದೆ ಎಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚರ‍್ಯ ಡಾ ಮಂಜುನಾಥ ಕೋಟ್ಯಾನ್ ನುಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ವತಿಯಿಂದ ಇರ್ವತ್ತೂರು ಕೊಳಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ‘ಸ್ವಚ್ಛ ಪರಿಸರ ಮತ್ತು ಸ್ವಚ್ಛ ಸಮಾಜಕ್ಕಾಗಿ ಯುವಜನತೆ- ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಚಲನಾಶೀಲತೆಯ ಕೌಟುಂಬಿಕ ಪದ್ದತಿಯಲ್ಲಿ ಕಳೆದ ಈ ಶಿಬಿರದ ಏಳು ದಿನಗಳು ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಶಾಶ್ವತವಾಗಿ ಉಳಿಯುತ್ತದೆ. ಒಳ್ಳೆಯ ಶಿಕ್ಷಣ ವ್ಯವಸ್ಥೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅನುಸಂಧಾನವಾಗಿರಬೇಕು. ರಾಷ್ಟೀಯ ಸೇವಾ ಯೋಜನೆಯು ಈ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಶ್ರದ್ಧೆ ಹಾಗೂ ಪೂರ್ವ ಸಿದ್ದತೆಗಳು ಎನ್‌ಎಸ್‌ಎಸ್ ಕಲಿಸುವ ಆರಂಭಿಕ ಪಾಠ. ಜೀವನದಲ್ಲಿ ಬದಲಾವಣೆಗಿಂತ ಪರಿವರ್ತನೆ ಅತೀ ಮುಖ್ಯ. ಕೆತ್ತಿಸಿಕೊಳ್ಳಲು ತಾಳ್ಮೆ ಇಲ್ಲದವರು ಮೂರ್ತಿಯಾಗಲು ಹಂಬಲಿಸಬಾರದು. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ದರ‍್ಯದಿಂದ ಎದುರಿಸಬೇಕು. ಮನುಷತ್ವ ಸದಾ ನಮ್ಮ ಮನಸ್ಸಿನ ಭಾಗವಾಗಿರಬೇಕು. ತೊಡಗಿಸಿಕೊಳ್ಳುವುದರಲ್ಲಿ ಸಿಗುವ ಆನಂದ ಅಡಗಿಸಿಕೊಳ್ಳುವುದರಲ್ಲಿ ಸಿಗಲಾರದು. ರಾಷ್ಟ್ರಿಯ ಸೇವಾ ಯೋಜನೆಯು ಇಂತಹ ಹತ್ತು ಹಲವು ಬದುಕಿನ ಪಾಠಗಳನ್ನು ಕಲಿಸುವ ವೇದಿಕೆಯದ್ದರಿಂದ, ಇದರ ಸದ್ಬಳಕೆ ಅತೀ ಮುಖ್ಯ ಎಂದರು.

ಆಳ್ವಾಸ್‌ನ ವಿದ್ಯಾರ್ಥಿಗಳು ತಮ್ಮ ಜೀವನದ ಆದರ್ಶ ವ್ಯಕ್ತಿಗಾಗಿ ಹುಡುಕಾಡುವ ಅಗತ್ಯವಿಲ್ಲ, ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವರ ವ್ಯಕ್ತಿತ್ವವೇ ಆದರ್ಶಪ್ರಾಯ. ಸದಾ ಸಮಾಜದ ಉನ್ನತಿಗಾಗಿ ತುಡಿಯುವ ಅವರ ಸ್ವಭಾವ ಯುವ ಜನತೆಗೆ ದಾರಿದೀಪ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗಣನೀಯ ಪ್ರಮಾಣದಲ್ಲಿ ಧನಾತ್ಮಕ ಬದಲಾವಣೆ ತರಬಲ್ಲ ಶ್ರೇಷ್ಠ ವೇದಿಕೆ ರಾಷ್ಟ್ರಿಯ ಸೇವಾ ಯೋಜನೆ. ಇಲ್ಲಿ ಕಲಿತ ಶಿಸ್ತಿನ ಪಾಠವನ್ನು ಬದುಕಿನಲ್ಲಿ ಆಳವಡಿಸಿಕೊಂಡಾಗ ಅದರ ಮೌಲ್ಯ ಇನ್ನಷ್ಟು ದುಪ್ಪಟ್ಟಾಗುತ್ತದೆ ಎಂದರು.
ಅಧ್ಯಕ್ಷತೆವಹಿಸಿ ಮಾತಾನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೋ ಸದಾಕತ್, ಜೀವನದಲ್ಲಿ ಆಗುವ ಪ್ರತಿ ಪ್ರಗತಿಯು ಬದಲಾವಣೆಯ ಸಂಕೇತ, ಆದರೆ ಪ್ರತಿ ಬದಲಾವಣೆ ಪ್ರಗತಿಯ ಸಂಕೇತವಲ್ಲ. ವ್ಯಕ್ತಿಯ ಜೀವನದಲ್ಲಿನ ಬದಲಾವಣೆ ಮುಖ್ಯವಲ್ಲ, ಆದರೆ ಪರಿವರ್ತನೆ ಸದಾ ಯಶಸ್ಸಿನೆಡೆಗೆ ಸಾಗಿಸುತ್ತದೆ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಕೋಟ್ಯಾನ್, ಇರ್ವತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭರತ ಕುಮಾರ ಜೈನ್ ಮಾತನಾಡಿದರು. ಇರ್ವತ್ತೂರು ಗ್ರಾಮ ಪಂಚಾಯತಿ ಸದಸ್ಯ ಶರತ್ ಅಂಚನ್, ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರದ ವ್ಯವಸ್ಥಾಪಕ ಅಂಬರೀಶ್ ಚಿಪಳೂಣಕರ್ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಅರುಣ್ ಕುಮಾರ್ ಓ.ಆರ್ ಏಳು ದಿನಗಳ ಕಾಲ ನಡೆದ ವಾರ್ಷಿಕ ಶಿಬಿರದ ವರದಿಯನ್ನು ವಾಚಿಸಿದರು. ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದ ಇರ್ವತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭರತ ಕುಮಾರ ಜೈನ್‌ನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶಿಬಿರಕ್ಕೆ ಸಹಕಾರ ನೀಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಂಕಿತ ಹಾಗೂ ಜೀವನ್‌ನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳಾದ ವರುಣ್ ಕಶ್ಯಪ್, ಶ್ರೀರಕ್ಷಾ, ಬಸವೇಶ್, ರ‍್ಯನ್ ಜಯಕುಮಾರ್ ಅನುಭವ ಹಂಚಿಕೊAಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿ ಶೆಲೆಟ್ ಮೋನಿಸ್ ನಿರೂಪಿಸಿ, ಮೇಘನಾ ಸ್ವಾಗತಿಸಿ, ಆಕಾಶ್ ಬಹುಮಾನದ ಪಟ್ಟಿಯನ್ನು ವಾಚಿಸಿ, ಸ್ವಾತಿ ವಂದಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.