



ಹೊಸದಿಲ್ಲಿ:: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ
ಅಸಾನಿ ಚಂಡಮಾರುತದಿಂದ ಕರಾವಳಿ ರಾಜ್ಯಗಳು ತತ್ತರಿಸಿದ್ದು, ಹಲವೆಡೆ ವಿಮಾನ ಹಾಗೂ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಕರಾವಳಿ ರಾಜ್ಯಗಳಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಸಾನಿ ಚಂಡಮಾರುತ ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.
ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ವಿಮಾನಗಳ ಮಾರ್ಗ ಬದಲಾವಣೆಯಾಗಿದೆ. ಮಂಗಳವಾರದವರೆಗೆ 19 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಬುಧವಾರ, ಇಂಡಿಗೋ ಸಂಸ್ಥೆ 23 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ದೆಹಲಿ-ವಿಶಾಖಪಟ್ಟಣಂ, ಬೆಂಗಳೂರು-ವಿಶಾಖಪಟ್ಟಣಂ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಮುಂಬೈ-ರಾಯಪುರ ಮತ್ತು ವಿಶಾಖಪಟ್ಟಣ-ದೆಹಲಿ ಸೇವೆಗಳನ್ನು ರದ್ದುಗೊಳಿಸಿದೆ. ವಿಮಾನಗಳು ಲ್ಯಾಂಡಿಂಗ್ ಆಗಲು ಪ್ರತಿಕೂಲ ಹವಾಮಾನ ಕಾರಣ ಎಂದು ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ದಕ್ಷಿಣ ಮಧ್ಯ ರೈಲ್ವೆ ಬುಧವಾರ ಒಟ್ಟು 37 ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವನ್ನು ರಿಷೆಡ್ಯೂಲ್ ಮಾಡಲಾಗಿದೆ. ವಿಜಯವಾಡ-ಮಚಿಲಿಪಟ್ಟಣಂ, ಮಚಿಲಿಪಟ್ಟಣಂ-ವಿಜಯವಾಡ, ವಿಜಯವಾಡ-ನರಸಾಪುರ, ನರಸಾಪುರ-ನಿಡದವೋಲು, ನಿಡದವೋಲು-ನರಸಾಪುರ, ನರಸಾಪುರ-ವಿಜಯವಾಡ, ವಿಜಯವಾಡ-ನರಸಾಪುರ, ನಿಡದವೋಲು-ಭೀಮಾವರಂ ಜಂಕ್ಷನ್, ಭೀಮಾವರಂ ಜಂಕ್ಷನ್- ಮಚಲಿಪಟ್ಟಣಂ-ಗುಡಿವಾಡ, ಭೀಮಾವರಂ ಜಂಕ್ಷನ್-ಮಚಿಲಿಪಟ್ಟಣಂ, ಗುಡಿವಾಡ-ಮಚಿಲಿಪಟ್ಟಣಂ, ನರಸಾಪುರ-ಗುಂಟೂರು, ಗುಂಟೂರು-ನರಸಾಪುರ, ಕಾಕಿನಾಡ ಬಂದರು-ವಿಜಯವಾಡ ರೈಲುಗಳು ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.