logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಶಾಸಕನಾಗಿ, ಸಚಿವನಾಗಿ ಆ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ : ವಿ.ಸುನಿಲ್‌ಕುಮಾರ್

ಟ್ರೆಂಡಿಂಗ್
share whatsappshare facebookshare telegram
8 May 2023
post image

   ಕಾರ್ಕಳ: ಶಾಸಕನಾಗಿ, ಸಚಿವನಾಗಿ ಆ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಸಾಕಾರವಾಗಿದೆ. ಅಂತರ್ಜಲ ವೃದ್ಧಿಗೆ ದಾಖಲೆ ಕಿಂಡಿ ಅಣೆಕಟ್ಟುಗಳು, ಕೆರೆಗಳ ಅಭಿವೃದ್ಧಿ,  ಸರಕಾರಿ, ಆಸ್ಪತ್ರೆ, ಕಟ್ಟಡಗಳ ಆಧುನೀಕರಣ, ಶಿಕ್ಷಣದ ಕ್ಷೇತ್ರದ ಉನ್ನತೀಕರಣ, ಸೇತುವೆಗಳು, ದ್ವಿಪಥ-ಚತುಷ್ಪಥ ರಸ್ತೆಗಳು, ಕಾರ್ಕಳ ಉತ್ಸವದಂತಹ ಅಭೂತಪೂರ್ವ ಕಾರ್ಯಕ್ರಮ, ದೇಶದ ಗಮನ ಸೆಳೆದ ಕರಾವಳಿಯ ಸೃಷ್ಟಿಕರ್ತ ಪರಶುರಾಮನ ಥೀಂ ಪಾರ್ಕ್ ನಿರ್ಮಾಣ, ಕಾರ್ಕಳದ ಜನತೆಗೆ ಉದ್ಯೋಗ ಕಲ್ಪಿಸಿಕೊಡಲಿರುವ ಜವಳಿ ಪಾರ್ಕ್ ಸೇರಿದಂತೆ ಅನೇಕ ಜನಹಿತ ಕಾರ್ಯಗಳು ಸಾಕಾರಗೊಂಡಿವೆ. ಸಾಮಾನ್ಯರ ಸಂಕಷ್ಟಗಳಿಗೆ ಸಂವೇದನಾಶೀಲನಾಗಿ ಸ್ಪಂದಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಕಾರ್ಕಳದ ಅಭಿವೃದ್ಧಿಯ ಕನಸು ಹೊತ್ತು ಕೆಲಸ ಮಾಡುತ್ತಿರುವ ನನಗೆ ಸ್ವರ್ಣ ಕಾರ್ಕಳದ ನಿರ್ಮಾಣಕ್ಕಾಗಿ ಮತ್ತೊಮ್ಮೆ  ಅವಕಾಶ ನೀಡುವಂತೆ  ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್‌ಕುಮಾರ್ ಮನವಿ ಮಾಡಿದರು. ಬೆಳ್ಮಣ್ ಪರಿಸರದಲ್ಲಿ ಮತಯಾಚಿಸಿ ಮಾತನಾಡಿದರು.

ಸ್ವರ್ಣ ಕಾರ್ಕಳದ ಸಾರ್ಥಕ ಹಾದಿ ರೈತರ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, 108 ಕೋಟಿ ರೂ ವೆಚ್ಚದಲ್ಲಿ ಎಣ್ಣೆಹೊಳೆ ನೀರಾವರಿ ಯೋಜನೆ ಅನುಷ್ಠಾನ, ಮುಖ್ಯ ರಸ್ತೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಹೆಬ್ರಿ ತಾಲೂಕಿಗೆ ಸಂಪೂರ್ಣ ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ತಾಲೂಕು ಪಂಚಾಯತ್‌ ಕಚೇರಿ, ನೂತನ ಬಸ್ ನಿಲ್ದಾಣ ಕಾಮಗಾರಿ ಆರಂಭ, ಸುಸಜ್ಜಿತ ತಾಲೂಕು ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ, ಆಮ್ಲಜನಕ ಉತ್ಪಾದನಾ ಘಟಕ, ಮಕ್ಕಳ ತೀವೃ ನಿಗಾ ಘಟಕ ಸ್ಥಾಪನೆ, 25 ವರ್ಷಗಳ ಹಳೆಯ ಚರಂಡಿ ವ್ಯವಸ್ಥೆ ಮರುನಿರ್ಮಾಣ, ವೈಜ್ಞಾನಿಕ, ಆಧುನಿಕ ತಂತ್ರಜ್ಞಾನ ಬಳಕೆ, ನಿಟ್ಟೆ ಎಂಆರ್‌ಎಫ್ ಘಟಕ, ಹೆಬ್ರಿಯಲ್ಲಿ ಮಿನಿ ಎಂಆರ್.ಎಫ್ ಘಟಕ ಸ್ಥಾಪನೆ ಮೂಲಕ ತ್ಯಾಜ್ಯ ಮುಕ್ತಿ, ಸ್ವಚ್ಛತೆಗೆ ಆದ್ಯತೆ, ಪೇಟೆಗಳ ಸಮಗ್ರ ಅಭಿವೃದ್ಧಿ ಜೋಡುರಸ್ತೆ, ಬಜಗೋಳಿ, ಮುನಿಯಾಲು, ಬೈಲೂರು 4 ಪಥದ ರಸ್ತೆಗಳಾಗಿ ಪರಿವರ್ತನೆ, ಹೆಬ್ರಿ ಮತ್ತು ನಲ್ಲೂರಿನಲ್ಲಿ  ಹರಿಯಪ್ಪನ ಕೆರೆ ಬಳಿ ಆಕರ್ಷಕ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣ, ತಾಲೂಕು ಕಚೇರಿ ಬಳಿ ಅತ್ಯಾಕರ್ಷಕ ವಾಜಪೇಯಿ ಉದ್ಯಾನವನ, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ನವರೂಪ ಪಡೆಯುತ್ತಿರುವ ಕೋಟಿ ಚೆನ್ನಯ ಥೀಂ ಪಾರ್ಕ್, ಆರನೇ ಯಕ್ಷರಂಗಾಯಣ ಕೇಂದ್ರ ಕಾರ್ಕಳದಲ್ಲಿ ನಿರ್ಮಾಣ,  ಬಿ.ಎಸ್ಸಿ ನರ್ಸಿಂಗ್ ಕಾಲೇಜು, ಜರ್ಮನ್ ತಂತ್ರಜ್ಞಾನದೊಂದಿಗೆ ಯುವಕರಿಗೆ ಉದ್ಯೋಗ ಭದ್ರತೆ ನೀಡುವ ಕೆಜಿಟಿಟಿಐ, ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದ ಐಟಿಐ ಕಾಲೇಜು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾಸ್ಟೇಲ್ ಹಾಗೂ ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣ. ಸಾಣೂರು ಮಠದ  ಕೆರೆ ಅಭಿವೃದ್ಧಿ ಮೂಲಕ ಕೃಷಿ ಭೂಮಿಗಳಿಗೆ ನೀರಧಾರೆ, ಪಳ್ಳಿ ಖೈರು ಕೆರೆ ಮುದ್ರಾಡಿ ಮದಗ ಕೆರೆ, ಹಿರ್ಗಾನ ಹರಿಯಪ್ಪನ ಕೆರೆ, ಎಳ್ಳಾರೆ ಹೊನ್ನೆಜೆಡ್ಡು ಕೆರೆ, ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನ ಕೆರೆ ಅಭಿವೃದ್ಧಿಗೊಳಿಸಲಾಗಿದೆ ಎಂದರು.

ದಾಖಲೆಯಲ್ಲಿ 94ಸಿ, 94 ಸಿಸಿ ಹಕ್ಕುಪತ್ರಗಳ ವಿತರಣೆ, 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಮಾಳದಲ್ಲಿ ಮಲೆಕುಡಿಯ ಸಭಾಭವನ ನಿರ್ಮಾಣ, ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ, ದೇವಸ್ಥಾನ, ದೈವಸ್ಥಾನಗಳ ಅಭಿವೃದ್ದಿಗೆ ನೆರವು, ಮೆಸ್ಕಾಂ ವಿಭಾಗೀಯ ಕಚೇರಿ, ನಿಟ್ಟೆ ಉಪವಿಭಾಗ ಕಚೇರಿ, ಶಾಖಾ ಕಚೇರಿಗಳ  ಸ್ಥಾಪನೆ, ಬೆಳ್ಮಣ್, ಅಜೆಕಾರು, ಬಜಗೋಳಿ ಹಾಗೂ ಬೈಲೂರಿನಲ್ಲಿ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ, ಹೆಚ್ಚುವರಿ ಟಿ.ಸಿಗಳ ಅಳವಡಿಕೆ, ಬಡ ಜನರಿಗೆ ಬೆಳಕು ಯೋಜನೆಯಲ್ಲಿ ಉಚಿತ ವಿದ್ಯುತ್, ಕಾರ್ಕಳ  ಕೋರ್ಟ್, ತಾಲೂಕು ಪಂಚಾಯತ್‌, ಪೊಲೀಸ್ ಅತಿಥಿಗೃಹ, ದೇವರಾಜ ಅರಸು ಭವನ, ಅಕ್ಷರ ಭವನ ಸೇರಿ ಸರಕಾರಿ ಕಟ್ಟಡಗಳ ನವೀಕರಣ, ಕೋವಿಡ್ ಸಂದರ್ಭ ಮುಂಬಯಿ, ಪುಣೆ, ಬೆಂಗಳೂರಿನ ಬಂಧುಗಳಿಗೆ ಕ್ವಾರಂಟೈನ್ ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ವಿವಿಧ ಆಯಾಮದಲ್ಲಿ ಸ್ಪಂದನೆ, ಸ್ಥಳಿಯ ಉತ್ಪನ್ನ ಕಾರ್ಲಕಜೆ, ಬಿಳಿಬೆಂಡೆಗೆ ಬ್ರ್ಯಾಂಡ್ ಬೆಳೆಯನ್ನಾಗಿಸಿ ಉತ್ತೇಜನ, ವಾತ್ಸಲ್ಯ ಆರೋಗ್ಯ ತಪಾಸಣೆ ಮೂಲಕ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ, ಭಾಷೆ, ಸಂಸ್ಕೃತಿ, ಕಲೆಯ ಸಂಭೃಮ ಕಾರ್ಕಳ ಉತ್ಸವ-2022. ಸ್ವರ್ಣ ಕಾರ್ಕಳದ ಮುಕುಟ ಪ್ರಾಯವಾದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮೊದಲಾದ  ಕಾರ್ಯಗಳ  ಮೂಲಕ ಅಮೂಲಾಗ್ರ ಬದಲಾವಣೆ ತರಲಾಗಿದೆ ಎಂದರು. ಅಭಿವೃದ್ದಿ ಎಲ್ಲವನೊಮ್ಮೆ ನೆನಪಿಸಿಕೊಳ್ಳಿ 5 ವರುಷ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಲಾಗಿದೆ.

ಮುಂದೆಯೂ ಮತ್ತಷ್ಟು ಅಭಿವೃದ್ಧಿ ಚಿಂತನೆ, ಯೋಚನೆ ಜತೆಗೆ ಸಾಧಿಸುವ ಹಂಬಲ ನನ್ನಲ್ಲಿದೆ. ಇದುವರೆಗೆ ಆಗಿರುವ ಅಭಿವೃದ್ದಿಯನ್ನು ನೆನಪಿಸಿಕೊಳ್ಳುತ್ತಲೆ ಮುಂದೆ ಆಗಬೇಕಾದ ಕಾರ್ಯಗಳ ಕಡೆ  ಗಮನಹರಿಸಬೇಕಿದೆ. ಹೀಗಾಗಿ  ಕಾರ್ಕಳದ ಜನತೆ ಮತ್ತೊಮ್ಮೆ ನನ್ನನ್ನು  ಬೆಂಬಲಿಸಿ ಅವಕಾಶ ನೀಡುವಂತೆ  ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.