



ಬೆಂಗಳೂರು : ಪ್ರಸ್ತುತ ಬಿಪಿಎಲ್ ಕಾರ್ಡ್ ಹೊಂದಿರೋರಿಗೆ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ ನೀಡಲಾಗುತ್ತಿದೆ. ಆದ್ರೇ ನಾನಾ ಕಾರಣಗಳಿಂದಾಗಿ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಆದ ಕಾರಣ, ಅನೇಕರಿಗೆ ಸಾಮಾಜಿಕ ಸೇವಾ ಭದ್ರತಾ ಪಿಂಚಣಿಯು ಕಳೆದ ಹಲವು ತಿಂಗಳುಗಳಿಂದ ನಿಂತು ಹೋಗಿದೆ.ಬಡವರ ಅನುಕೂಲಕ್ಕೆಂದು ಆರಂಭಿಸಿದ್ದಂತ ಯೋಜನೆಗಳ ದುರುಪಯೋಗ ತಡೆಯೋದಕ್ಕೆ ಒಂದಿಲ್ಲೊಂದು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಹೀಗೆ ಕೈಗೊಳ್ಳುವಂತ ಕ್ರಮಗಳೇ ಕೆಲವರಿಗೆ ತೊಂದರೆ ಉಂಟುಮಾಡುತ್ತಿದೆ.ರಾಜ್ಯದಲ್ಲಿ ಕುಟುಂಬದ ಆದಾಯದ ಆಧಾರದ ಮೇಲೆ ಅಕ್ರಮ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆಹಚ್ಚಿ, ಪಡಿತರ ಚೀಟಿ ರದ್ದು ಪಡಿಸಲಾಗಿದೆ. ಹೀಗೆ ಬಿಪಿಎಲ್ ಕಾರ್ಡ್ ರದ್ದಾದ ನಂತ್ರ, ಎಪಿಎಲ್ ಕಾರ್ಡ್ ನೀಡಲಾಗಿದೆ. ಇದರಿಂದಾಗಿ ಬಿಪಿಎಲ್ ಕಾರ್ಡ್ ಜೊತೆಗೆ, ಪಿಂಚಣಿಗೂ ಕೋಕ್ ನೀಡಲಾಗಿದೆ. ಕೆಲವು ಕುಟುಂಬಗಳಿಗೆ ಬಿಪಿಎಲ್ ಅರ್ಹತೆ ಇದ್ದರೂ ಹೊಡೆತ ಬಿದ್ದು, ಪಿಂಚಣಿ ಯೋಜನೆಯೂ ಕಟ್ ಆಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.