



ಕಾರ್ಕಳ: ನಾನು, ನನ್ನದು, ನನ್ನಿಂದ ಎನ್ನುವ ಅಹಂಕಾರ ಇದ್ದಲ್ಲಿ ಭಗವಂತನಿರಲ್ಲ ಮಮಕರವಿದ್ದಲಿ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದು ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನಮ್ ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅ. ೨೪ ರಂದು ನಡೆದ ಬೈಲೂರು ಶ್ರೀ ಮಹಾಲಿಂಗೇಶ್ವರ ದೇವರ ನೂತನ ಶಿಲಾಮಯ ಗರ್ಭಗೃಹ ನಿರ್ಮಾಣದ ಪ್ರಾರಂಭ ಹಂತದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಆರ್ಥಿಕ ಮತ್ತು ಪಾರಮಾರ್ಥಿಕ ಸೇರಿದರೆ ಕೈಗೊಂಡ ಕಾರ್ಯ ಸಾರ್ಥಕವಾಗುತ್ತದೆ. ಮಹತ್ಕಾರ್ಯದಲ್ಲಿ ಎಲ್ಲರು ಸೇರಿಕೊಂಡರೆ ದೇಗುಲ ಜೀರ್ಣೋದ್ಧಾರ ಕಾರ್ಯ ಸುಲಲಿತವಾಗಿ ನೆರವೇರುವುದು ಎಂದರು. ಮನುಷ್ಯನ ಸಂಕಲ್ಪ ಶಕ್ತಿಗಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ಸಂಕಲ್ಪ ಶಕ್ತಿಯೇ ನಾವು ಕೈಗೊಂಡ ಕಾರ್ಯಕ್ಕೆ ಪ್ರೇರಣೆ ಈ ಸಂಕಲ್ಪಕ್ಕೆ ಭಗವಂತನ ಅನುಗ್ರಹ ಇರಲಿ ಎಂದರು. ಶಾಸಕ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿ. ಸುನಿಲ್ ಕುಮಾರ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಪೂರ್ವಜರಿಂದ ಆರಾಧಿಸಲ್ಪಟ್ಟಿರುವ ಗ್ರಾಮದ ದೇವಸ್ಥಾನಗಳು ಇಂದು ಜೀರ್ಣೋದ್ಧಾರಗೊಳ್ಳುವುದು ನಮ್ಮ ಪುಣ್ಯದ ಫಲ. ಕಾಲ ತಕ್ಕಂತೆ ದೇವಸ್ಥಾನಗಳ ಪುನರ್ ನಿರ್ಮಾಣ ಕಾರ್ಯ ನಡೆಯುತ್ತ ಬಂದಿದೆ. ಆ ಮೂಲಕ ಧಾರ್ಮಿಕತೆ ಮನೋಭವ ನಮ್ಮಲ್ಲಿ ಬೆಳೆದಿದೆ. ದೇವಸ್ಥಾನಕ್ಕೆ ೧ ಕೋಟಿ ಕೊಟ್ಟರೂ ಭಕ್ತನೆ, ೧೦೦ ರೂ. ಕೊಟ್ಟವನೂ ಭಕ್ತನೆ. ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯವೆಂದರು. ಪ್ರಸಕ್ತ ವರ್ಷದಲ್ಲಿ ಕಾರ್ಕಳ ತಾಲೂಕಿನಾದ್ಯಂತ ಹಲವಾರು ದೇವಸ್ಥನಗಳು ಜೀಣೋದ್ಧಾರಗೊಳ್ಳುತ್ತಿರುವುದು ನಮ್ಮೇಲ್ಲರ ಭಾಗ್ಯವೇ ಸರಿ ಎಂದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ ಅನುದಾನ ಒದಗಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ದೇವರ ಮಂದೆ ಎಲ್ಲರೂ ಸಮಾನರು. ಬೇದಭಾವ ಮೇಲು ಕೀಲು ಸಲ್ಲದು ದೇವಸ್ಥಾನದಲ್ಲಿ ಮನಸ್ತಾಪವಿರಬಾರದು ಎಂದರು. ತಮ್ಮ ಸಂಸ್ಥೆಗೆ ಸಹಕಾರ ನೀಡಿದ ಓಣಿಮಜಲು ಜಗನ್ನಾಥ ಶೆಟ್ಟಿಯವರನ್ನು ಸ್ಮರಿಸಿಕೊಂಡು ಅವರ ಮೇಲಿನ ಅಭಿಮಾನದಿಂದಾಗಿ ದೇವಸ್ಥಾನದ ಜೀರ್ಣೋದ್ಧಾಕ್ಕೆ ಶಿಕ್ಷಣ ಸಂಸ್ಥೆಯ ವತಿಯಿಂದ ಮೂರು ಲಕ್ಷದ ಒಂದು ರೂ.ನ್ನು ದೇಣಿಗೆ ನೀಡುವುದಾಗಿ ಸುಧಾಕರ್ ಶೆಟ್ಟಿ ತಿಳಿಸಿದರು. ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಬಾಲಾಜಿತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವೈದ್ಯಾಧಿಕಾರಿ ಡಾ. ದಿನೇಶ್ಚಂದ್ರ ಹೆಗ್ಡೆ, ರಂಗಪ್ಪ ಕಿಣಿ, ಸಂತೋಷ್ ವಾಗ್ಲೆ, ಸಮಿತಿಯ ಗೌರವಾಧ್ಯಕ್ಷರಾದ ಕರುಣಾಕರ ಹೆಗ್ಡೆ, ಕಾರ್ಯಾಧ್ಯಕ್ಷ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಆನಂದ ಪೂಜಾರಿ ಸಹದೇವ ಕಿಣಿ, ದೇವಸ್ಥಾನ ಪ್ರಧಾನ ಅರ್ಚಕ ನರಸಿಂಹ ತಂತ್ರಿ, ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು. ಹರೀಶ್ ಆಚಾರ್ಯ ಪ್ರಾರ್ಥಿಸಿದರು. ಉದಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಸಾಲಿಯಾನ್ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.