



ವಿದೇಶಿ ಫಂಡಿಂಗ್ ನಿಂದ ದೇಶ ಅಸ್ಥಿರಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಬಂಡಾರಿ ಉಡುಪಿಯಲ್ಲಿಂದು ತಿರುಗೇಟು ನೀಡಿದ್ರು.
ದೇಶದ ಪ್ರಜೆಯಾಗಿ ಈ ಹೇಳಿಕೆಯಿಂದ ನನಗೆ ಆಘಾತವಾಗಿದೆ. ಕೇಂದ್ರದ ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲಿ, ಸರಕಾರ ಅಧಿಕಾರ ನಿಮ್ಮ ಕೈಯಲ್ಲಿದೆ. ದೇಶವನ್ನು ಅಸ್ತಿರಗೊಳಿಸುವ ವ್ಯಕ್ತಿಗಳು ಯಾರೇ ಇರಬಹುದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು ಎಂದು ಸವಾಲೆಸೆದ್ರು.
ಕುಸ್ತಿಪಟುಗಳ ಹೋರಾಟಕ್ಕೆ ವಿದೇಶಿ ಫಂಡಿಂಗ್ ಆಗಿದೆಂಬ ಹೇಳಿಕೆಗೆ ಉತ್ತರಿಸಿದ ಅವರು, ನಿಮ್ಮ ಹೇಳಿಕೆ ಅತ್ಯಂತ ಕನಿಷ್ಠವಾಗಿದೆ. ಒಲಂಪಿಕ್ಸ್ ನಲ್ಲಿ ಮೆಡಲು ಗೆದ್ದವರನ್ನು ಅವಮಾನಗೊಳಿಸಿದಿರಿ. ಮೆಡಲು ಗೆದ್ದಾಗ ಕರೆದು ಪ್ರಧಾನಿ ಜೊತೆ ಚಹಾ ಕೂಟ ನಡೆಸುತ್ತೀರಿ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎನ್ನುತ್ತಿದ್ದಾರೆ. ಇದಕ್ಕೂ ವಿದೇಶಿ ಹಣಕ್ಕೂ ಏನು ಸಂಬಂಧ. ನೀವು ಒಬ್ಬ ಮಹಿಳಾ ಮಂತ್ರಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ. ಇಂತಹ ಬಾಲಿಷ ಹೇಳಿಕೆಗಳನ್ನು ಕೊಡಬೇಡಿ ಎಂದು ತಿರುಗೇಟು ನೀಡಿದ್ರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.