



ಬೆಂಗಳೂರು: ಇತ್ತೀಚೆಗೆ ಟೆಕ್ನಾಲಜಿಗಳ ಬಳಕೆ ಹೆಚ್ಚಾಗಿದೆ. ಮೊಬೈಲ್, ಲ್ಯಾಪ್‌ಟಾಪ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ಇದೀಗ ವಂಚಕರ ಹಾವಳಿಯೂ ಹೆಚ್ಚಾಗಿದೆ. ಈ ಮೊಬೈಲ್ ಬಳಕೆದಾರರ ಹಣವನ್ನು ದೋಚುವ ನಿಟ್ಟಿನಲ್ಲಿ ಸೈಬರ್ ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ತಾ ಇದ್ದಾರೆ. ಸೈಬರ್ ವಂಚಕರ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಎಸ್‌ಎಮ್‌ಎಸ್, ಓಟಿಪಿ, ಕಾಲ್ ಈ ರೀತಿಯೆಲ್ಲಾ ಜನರನ್ನು ಸೈಬರ್ ವಂಚಕರು (Cyber Fraudsters) ಮೋಸ ಮಾಡುತ್ತಿದ್ದಾರೆ. ಈ ಮಧ್ಯೆ ಮನೆಯಲ್ಲೇ ಇರುವ ಜನರನ್ನು ವಂಚಿಸಲು ಈ ದುಷ್ಕರ್ಮಿಗಳು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪೋಸ್ಟ್ ಬಂತು, ಪ್ರೈಸ್ ಸಿಕ್ತು ಅಂತ ನಂಬಿ ಹೋದ್ರೆ ಮೋಸ ಹೋಗೋದು ಗ್ಯಾರಂಟಿ.
ಹೌದು, ಈ ಸೈಬರ್ ವಂಚಕರು ಈ ಫೋನ್, ಎಸ್‌ಎಮ್‌ಎಸ್, ಓಟಿಪಿ ವಂಚನೆಗಳನ್ನು ಬಿಟ್ಟು ಪೋಸ್ಟ್‌ನತ್ತ ಮುಖ ಮಾಡಿದ್ದಾರೆ. ಮನೆ ಮನೆಗೆ ಪೋಸ್ಟ್ ಒಂದನ್ನು ಕಳುಹಿಸಿ ಅಮಾಯಕರನ್ನು ವಂಚನೆ ಮಾಡಲು ಮುಂದಾಗಿದ್ದಾರೆ.
ಫೋಸ್ಟ್ ನಲ್ಲಿ ಪ್ರೈಸ್ ವಿನ್ನಿಂಗ್ ವೋಚರ್ ಬಂದ್ರೆ ಎಚ್ಚರ ಎಚ್ಚರ, ಅನ್ಲೈನ್ ನಲ್ಲಿ ವಸ್ತುಗಳನ್ನ ಖರೀದಿಸುವವರೇ ಇವರಿಗೆ ಮೈನ್ ಟಾರ್ಗೆಟ್. ತಪ್ಪಿ ಈ ಮೋಸದ ಜಾಲಕ್ಕೆ, ಗಿಫ್ಟ್ ಅಥವಾ ಕ್ಯಾಶ್ ಪ್ರೈಸ್ ಗೆ ಆಸೆಗೆ ಬಿದ್ದು ಹೋದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಅಕೌಂಟ್.
ಇತ್ತೀಚೆಗೆ ಪೋಸ್ಟ್ ಈ ಸೈಬರ್ ವಂಚಕರು ಪೋಸ್ಟ್ ಒಂದನ್ನು ಕಳುಹಿಸುತ್ತಾರೆ, ಇದರಲ್ಲಿ ಪ್ರೈಸ್ ವಿನ್ನಿಂಗ್ ವೋಚರ್ ಗೆಲ್ಲೋ ಆಸೆಯನ್ನು ಹುಟ್ಟಿಸುತ್ತಾರೆ. ಬ್ಯುಸಿನೆಸ್ ಆ್ಯಪ್ ಹೆಸರಲ್ಲಿ ಇಂತಹ ಯಾವುದೇ ಪೋಸ್ಟ್ ಬಂದ್ರೂ ನಂಬಬೇಡಿ, ನಂಬಿ ಕಾಲ್ ಮಾಡ್ಬೇಡಿ ಎಂದು ಇದೀಗ ಎಚ್ಚರಿಕೆ ನೀಡಿದ್ದಾರೆ.
ಮೊದಲಿಗೆ ಗಿಫ್ಟ್ ಕಾರ್ಡ್ ಕಳಿಸಿ ಸ್ಕ್ರಾಚ್ ಮಾಡಿದ್ರೆ ನಿಮಗೆ ಸಿಗುತ್ತೆ 51 ಲಕ್ಷ ಅಂತ ಆಸೆ ತೋರಿಸ್ತಾರೆ. ಆ ಬಳಿಕ ವಿನ್ನಿಂಗ್ ವೋಚರ್ ಕೆಳಗಡೆ ಇರುವ ನಂಬರ್ ಗೆ ಕಾಲ್ ಮಾಡಿ ಅಂತಾರೆ. ಕಾಲ್ ಮಾಡಿದ ತಕ್ಷಣ 51 ಲಕ್ಷ ಬೇಕಾದ್ರೆ ಜಿಎಸ್ ಟಿ ಕಟ್ಟಬೇಕು ಎಂದು ಹೇಳಿಳುತ್ತಾರೆ. ಇದನ್ನು ನಂಬಿ ಒಂದು ವೇಳೆ ಹಣ ಕೊಟ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಅಂತಾನೇ ಅರ್ಥ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.