



ಹಿಸಾರ್ (ಹರಿಯಾಣ): ಅಕ್ರಮ ಗರ್ಭಪಾತಕ್ಕೆ ಯತ್ನಿಸಿದ ಅವಿವಾಹಿತ ಯುವತಿಯೊಬ್ಬಳು (19) ಮೃತಪಟ್ಟ ಘಟನೆ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಹಿಸಾರ್‌ನ ಆಗ್ರೋಹಾದಲ್ಲಿರುವ ಮಹಾರಾಜ ಅಗ್ರಸೇನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.16 ರಂದು ಸಂಜೆ 6 ಗಂಟೆಗೆ ಅಕ್ರಮ ಗರ್ಭಪಾತಕ್ಕೆ ಬಲಿಯಾದ ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಕಾಲೇಜಿಗೆ ದಾಖಲಿಸಲಾಗಿತ್ತು. ಆಕೆ ಸೆಪ್ಟಿಕ್ ಶಾಕ್(ಅಂಗಾಂಗ ವೈಫಲ್ಯ ಮತ್ತು ಅಪಾಯಕಾರಿ ಕಡಿಮೆ ರಕ್ತದೊತ್ತಡವನ್ನು ಉಂಟುಮಾಡುವ ಸೋಂಕು)ಗೆ ಒಳಗಾಗಿದ್ದಳು. ಗರ್ಭಾಶಯದಲ್ಲಿ ಗಾಯಗಳಾಗಿತ್ತು ಎಂದು ಅಗ್ರಸೇನ್ ವೈದ್ಯಕೀಯ ಕಾಲೇಜು ನಿರ್ದೇಶಕಿ ಅಲ್ಕಾ ಛಾಬ್ರಾ ತಿಳಿಸಿದ್ದಾರೆ.
ಮಹಿಳೆ ಅವಿವಾಹಿತೆಯಾಗಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಮಾರ್ಚ್ 14 ರಂದು ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗರ್ಭಪಾತಕ್ಕೆ ಪ್ರಯತ್ನಿಸಿದ ಬಳಿಕ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ಛಾಬ್ರಾ ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.