logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರದ ಆರೂರು ಗ್ರಾಮದಲ್ಲಿ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ, ನಗದು ಕಳ್ಳತನ

ಟ್ರೆಂಡಿಂಗ್
share whatsappshare facebookshare telegram
30 Nov 2022
post image

ಬ್ರಹ್ಮಾವರ: ಹಿಂಬದಿಯ ಬಾಗಿಲು‌ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ವಸ್ತುಗಳನ್ನು‌ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲು ಎಂಬಲ್ಲಿ ನ.28ರಂದು ರಾತ್ರಿ 10ಗಂಟೆಗೆ‌ ನಡೆದಿದೆ. ಕುಂಜಾಲು ನಿವಾಸಿ 61ವರ್ಷದ ಎ. ಭಾಸ್ಕರ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ‌ ನಡೆದಿದೆ. ಇವರು ನಿನ್ನೆ ರಾತ್ರಿ 7ಗಂಟೆಗೆ ಮನೆಗೆ ಬೀಗ ಹಾಕಿ ತನ್ನ ಪತ್ನಿ‌ಯೊಂದಿಗೆ ಬ್ರಹ್ಮಾವರದ ತಂಗಿಯ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದರು. ಬಳಿಕ ಕಾರ್ಯಕ್ರಮ ಮುಗಿಸಿ 10ಗಂಟೆಗೆ ವಾಪಸ್ಸು ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಡೈನಿಂಗ್‌ ಹಾಲ್‌ ನಲ್ಲಿ ಇರಿಸಿದ್ದ ಗೊಡ್ರೇಜ್‌ ನ ಬೀಗ ಮುರಿದು ಬಟ್ಟೆಯನ್ನೆಲ್ಲಾ ಚೆಲ್ಲಾ ಪಿಲ್ಲಿ ಮಾಡಿದ್ದಾರೆ. ಅಲ್ಲದೆ, ಪರ್ಸ್‌ನೊಳಗಡೆ ಇರಿಸಿದ್ದ ಸುಮಾರು 3 ಗ್ರಾಂ. ತೂಕದ ಚಿನ್ನದ ಉಂಗುರ, ತಲಾ 10 ಗ್ರಾಂ. ತೂಕದ 4 ಬೆಳ್ಳಿಯ ಕಾಯಿನ್‌, 5 ಸಾವಿರ ನಗದು, ಹೊಸ ಸೀರೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಒಟ್ಟು ಸೊತ್ತುಗಳ ಮೌಲ್ಯ 26,080 ರೂ. ಆಗಿದೆ ಎಂದು‌ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.