logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರಿನ ಸಚಿವ ಸಂಪುಟದ ಸಭೆಯಲ್ಲಿ ಆದಿವಾಸಿ ಮಲೆಕುಡಿಯರ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕು: ಶ್ರೀಧರ ಗೌಡ ಈದು

ಟ್ರೆಂಡಿಂಗ್
share whatsappshare facebookshare telegram
10 Sept 2026
post image

ಕಾರ್ಕಳ: ಮಂಗಳೂರಿನ ಸಚಿವ ಸಂಪುಟದ ಸಭೆಯಲ್ಲಿ ಆದಿವಾಸಿ ಮಲೆಕುಡಿಯ ರ ಮೂಲಸೌಕಾರ್ಯಗಳಿಗೆ ಒತ್ತು ನೀಡಬೇಕು ಎಂದು ಮಲೆಕುಡಿಯ ಸಂಘ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಶ್ರೀಧರ ಗೌಡ ಈದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ತಲತಲಾಂತರ ಗಳಿಂದ ಯಾವುದೇ ಮೂಲಸೌಕರ್ಯಗಳು ಸರಿಯಾಗಿಲ್ಲದೆ ಅತ್ಯಂತ ಸಂಕಷ್ಟದ ಜೀವನವನ್ನು ಸಮುದಾಯ ನಡೆಸುತ್ತಾ ಬಂದಿದ್ದು, ಈ ಬಾರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡಿರುವಂತದ್ದು ಕರಾವಳಿ ಭಾಗದ ಅಭಿವೃದ್ಧಿಯ ಜೊತೆಗೆ, ಇಲ್ಲಿನ ಅರಣ್ಯ ವಾಸಿಗಳ, ಆರೋಗ್ಯ ಉದ್ಯೋಗ, ಶಿಕ್ಷಣ, ಮನೆ, ವಸತಿ, ಮೂಲ ಸೌಕರ್ಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಒತ್ತನ್ನು ನೀಡಬೇಕು ಬುಡಕಟ್ಟು ಸಮುದಾಯ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ ಆಶಾದಾಯಕ ಅರಣ್ಯ ಹಕ್ಕು ಕಾಯ್ದೆ, ಸಮರ್ಪಕ ಜಾರಿ ಯಾಗುವುದರ ಮುಖಾಂತರ, ಕಾಯ್ದೆಯ ಸೆಕ್ಷನ್ 3(2) ಅವಕಾಶದಡಿ ಜಿಲ್ಲಾ ಹಂತದಲ್ಲೇ ರಸ್ತೆ ,ವಿದ್ಯುತ್ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ತುರ್ತಾಗಿ ಅವಕಾಶ ಕೊಡಬೇಕಾಗಿದೆ. ರಾಜ್ಯದ ಅರಣ್ಯಾಧಾರಿತ 13 ಬಡಕಟ್ಟು ಸಮುದಾಯದವರಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರವನ್ನು ಕಳೆದ ಏಳು ತಿಂಗಳಿನಿಂದ ಸರಕಾರ ನೀಡುತ್ತಿಲ್ಲ ಇದನ್ನು ಕೂಡಲೇ ವಿತರಣೆ ಮಾಡಬೇಕು .ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಸಾಧಕ ಭಾಗದ, ಬಗ್ಗೆ ವಿಸ್ತೃತ ಚರ್ಚೆಯೊಂದಿಗೆ ಭೌತಿಕ ಸಮೀಕ್ಷೆ ನಡೆಸಿ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂದವರು ತಿಳಿಸಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.