



ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್‍ನ ಹತ್ತನೇ ವಾರ್ಷಿಕೋತ್ಸವವು ಮಾ.11ರಂದು ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶಾ ವಿದ್ಯಾಲಯದ ಪ್ರಾಂಶುಪಾಲರಾದ ಗೋಪಾಲ ಕೃಷ್ಣರವರು ಮಾತನಾಡಿ ಭಾರತ್ ಸೇವಕ ಸಮಾಜದ ವಿವಿಧ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿದರು.
ಇಂದಿನ ಶಿಕ್ಷಕಿಯರು ಮಗುವಿಗೆ ಯಾವ ರೀತಿಯಲ್ಲಿ ತರಬೇತಿ ಕೊಡಬೇಕು ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸುವಲ್ಲಿ, ಶಿಸ್ತಿನ ಶಿಕ್ಷಕರ ಪಾತ್ರವು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಲು ಇರುವ ದಾರಿಯೆಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಶl ವಿಶ್ವನಾಥ ಕಾಮತ್‍ರವರು ಮಾತನಾಡಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ, ಪೂರ್ವಪ್ರಾಥಮಿಕ ಶಿಕ್ಷಕಿಯರನ್ನು ಎಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಚಂದ್ರಕಲಾರವರು ಅತ್ಯುತ್ತಮ ಹುದ್ದೆಯನ್ನು ನಿರ್ವಹಿಸಲು ಹಾಗೂ ಉತ್ತಮ ಸಮಾಜವನ್ನು ನಿರ್ಮಾಣಗೊಳಿಸಲು ಶಿಕ್ಷಕಿಯರ ಪಾತ್ರ ಮಹತ್ತರವಾದುದೆಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಸುನೀತಾರವರು ಶೈಕ್ಷಣಿಕ ವರದಿ ವಾಚನ ಮಾಡಿ, ಈಗಾಗಲೇ ಸಂಸ್ಥೆಯಲ್ಲಿ ಕಲಿಯುತ್ತಿರುವ 9 ವಿದ್ಯಾರ್ಥಿನಿಯರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು. ವಿದ್ಯಾರ್ಥಿನಿಯರಾದ ಗೀತಾಂಜಲಿ ರೋಡ್ರಿಗಸ್ ಅತಿಥಿಗಳನ್ನು ಸ್ವಾಗತಿಸಿ, ಹಾಗೂ ಕಾರ್ಯಕ್ರಮವನ್ನು ಶ್ರೀಮತಿ ಅನುರಾಧ ಮತ್ತು ಕುಮಾರಿ ಅಫ್ ಶೀನ್ ತಾಜ್‍ರವರು ನಿರೂಪಿಸಿದರು. ಶ್ರೀಮತಿ ಫರೀದಾರವರು ವಂದಾರ್ಪಣೆಗೈದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.