



ಕಾರ್ಕಳ: ದೇಶದ ನೈಜ ಇತಿಹಾಸವನ್ನು ಅಳಿಸಿಹಾಕಿ ಹೊಸ ಇತಿಹಾಸ ಬರೆಯಲು ಹೊರಟ ಪ್ರಧಾನಿ ನರೇಂದ್ರ ಮೋದಿ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಲ್ಲಿ ಈ ಮಣ್ಣಿನ ವಿವಿಧತೆಯಲ್ಲಿ ಏಕತೆಯ ಪರಂಪರಾನುಗತ ಬಹುತ್ವದ ಕೊಲೆ ಮಾಡಲು ಹೊರಟಿದೆ. ದೇಶದ ಪ್ರಜಾತಂತ್ರ ವ್ಯವಸ್ಥೆ ಇದನ್ನು ಸಹಿಸದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೀಸಲಾತಿ ಮತ್ತು ಬೌಗೋಲಿಕ ಆಧ್ಯತೆಯ ಬಗ್ಗೆ ನಿರ್ಣಾಯಕ ಪ್ರಸ್ತಾವನೆಯೇ ಇಲ್ಲದ ಈ ರಾಷ್ಟ್ರೀಯ ಶಿಕ್ಷಣ ನೀತಿಯ ಅಂತಿಮ ಗುರಿ ದೇಶವನ್ನು ಮನುವಾದೀ ಸಂಸ್ಕ್ರತಿಯ ಕೇಸರೀಕರಣದ ಹಿಡಿತಕ್ಕೊಳ ಪಡಿಸುವುದೇ ಆಗಿದೆ. ಇದೊಂದು ಅಪಾಯಕಾರೀ ಬೆಳವಣಿಗೆಯಾಗಿದ್ದು ಪರಿಣಾಮವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಶೋಷಿತ ವರ್ಗ ಶಿಕ್ಷಣ ವಂಚಿತವಾಲಿದೆ ಎಂದಿದ್ದಾರೆ. ಈಗಾಗಲೇ ದೇಶದ ಬಹುಪಾಲು ರಾಷ್ಟ್ರೀಯ ಉದ್ದಿಮೆಗಳನ್ನು ಮಾರಿ ದೇಶದ ಆರ್ಥಿಕತೆಯ ಕೀಗೊಂಚಲನ್ನು ಖಾಸಗೀಯವರ ಕೈಗಿತ್ತ ಈ ಸರಕಾರ ಇದೀಗ ಎನ್ಇಪಿ ಹೆಸರಲ್ಲಿ ಸಂಪೂರ್ಣ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣದ ಹುನ್ನಾರ ನಡೆಸುತ್ತಿದೆ. ಇದು ದೇಶವಾಸಿಗಳ ಸಂವಿಧಾನದತ್ತ ಶೈಕ್ಷಣಿಕ ಹಕ್ಕಿನ ಉಲ್ಲಂಘನೆಯಾಗಿದ್ದು ಕೇಂದ್ರ ಸರಕಾರ ಕೂಡಲೇ ಈ ಜನ ವಿರೋಧಿ ಶಿಕ್ಷಣ ನೀತಿಯನ್ನು ಹಿಂತೆಗೆದು ಕೊಳ್ಳಬೇಕು ಎಂದು ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.