



ಕಾರ್ಕಳ: ಎಸ್ ಕೆ ಪಿ ಎ (ರಿ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಕಾರ್ಕಳ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾರ್ಕಳ ಹೋಟೆಲ್ ಪ್ರಕಾಶ್ ಸಂಭ್ರಮ ಹಾಲ್ ನಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಶ್ರೀ ಸುಶೀಲ್ ಕುಮಾರ್ ಟಿ.ವಿ ಅಧಿಕಾರವನ್ನು ವಹಿಸಿಕೊಂಡರು.ಕಾರ್ಯಕ್ರಮದ ಉದ್ಘಾಟನೆಯನ್ನು ಶೈಲೇಂದ್ರ ರಾವ್ ರೋಟರಿ ಸಹಾಯಕ ಗವರ್ನರ್ ನೆರವೇರಿಸಿ ಶುಭ ಹಾರೈಸಿದರು. ಶ್ರೀ ಕರುಣಾಕರ್ ಕಾನಂಗಿ , ಶ್ರೀ ವಾಸುದೇವ್ ರಾವ್, ಶ್ರೀ ದಯಾನಂದ ಬಂಟ್ವಾಳ, ಶ್ರೀ ಆನಂದ ಎನ್ ಬಂಟ್ವಾಳ, ಶ್ರೀ ಜಯಕರ ಸುವರ್ಣ, ಶ್ರೀ ಈಶ್ವರ್ ಕುಂಟಾಡಿ ನಿಕಟ ಪೂರ್ವ ಅಧ್ಯಕ್ಷರು ಕಾರ್ಕಳ ವಲಯ, ಶ್ರೀ ಪ್ರಕಾಶ್ ಪ್ರಭು ನಿಯೋಜಿತ ಕೋಶಾಧಿಕಾರಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಮಹೇಂದ್ರ ಶೆಟ್ಟಿ ಹಾಗೂ ಚಂದ್ರನಾಥ ಬಜೆಗೋಳಿ ಅವರಿಗೆ ಸನ್ಮಾನಿಸಲಾಯಿತು. ಶ್ರೀ ಪದ್ಮಪ್ರಸಾದ್ ಜೈನ ಜಿಲ್ಲಾಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ರೊನಾಲ್ಡ್ ಕ್ಯಾಸ್ಟಲಿನೋ ಸ್ವಾಗತಿಸಿದರು. ಶ್ರೀ ಪ್ರಸನ್ನ ಹೆಗ್ಡೆ ಧನ್ಯವಾದವನ್ನು ನೀಡಿದರು ರಾಘವೇಂದ್ರ ಶೆರಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.