



ಕಾರ್ಕಳ ಬೈಲೂರಿನಲ್ಲಿ ನಡೆಯುತ್ತಿರುವ ತ್ರಿವರ್ಣ ಚಿತ್ರಕಲಾ ತರಗತಿ ಮತ್ತು ‘ಸಾದೃಶ್ಯ’ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ನಿರ್ದೇಶಕರಾದ ಶ್ರೀ ಯು. ಸಿ. ನಿರಂಜನ್‌ರವರು ಉದ್ಘಾಟನೆಗೈದು, ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಗೆ ಚಿತ್ರಕಲಾ ಕ್ಷೇತ್ರದ ಅವಶ್ಯಕತೆ ಅತ್ಯಗತ್ಯ ಇಂತಹ ಕಲಿಕೆಗೆ ಪೂರಕವಾಗಿ ಹಿರಿಯರು ಕಿರಿಯರೆನ್ನದೇ ಈ ಕ್ಷೇತ್ರದ ಅಳವಡಿಕೆಗೆ ತ್ರಿವರ್ಣ ಕಲಾ ಸಂಸ್ಥೆ ಬದ್ಧವಾಗಿದ್ದು, ೭೫ ವರ್ಷದವರೆಗಿನ ವಿದ್ಯಾರ್ಥಿಯರ ‘ಸಾದೃಶ್ಯ’ ಎಂಬ ಚಿತ್ರಕಲಾ ಪ್ರದರ್ಶನ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಮುಖ್ಯಅತಿಥಿಯರಾಗಿ ಹಿರಿಯ ಸಾಮಾಜ ಸೇವಕರಾದ ಶ್ರೀ ವಿಕ್ರಂ ಹೆಗ್ಡೆ, ಚಲನಚಿತ್ರ ನಟ, ನಾಟಕ ಕಲಾವಿದ ಶ್ರೀ ಪ್ರಸನ್ನ ಶೆಟ್ಟಿ ಬೈಲೂರು, ಬೈಲೂರು ಕೌಡೂರಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಗದೀಶ್ ಪೂಜಾರಿ, ನೀರೆ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ರವೀಂದ್ರ ಸುವರ್ಣ, ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸುಜಾತ ಶೆಟ್ಟಿ, ಕಲಾ ಕೇಂದ್ರದ ಮುಖ್ಯಸ್ಥ ಹರೀಶ್ ಸಾಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನಾ ಗಣೇಶ್ ಕಾರ‍್ಯಕ್ರಮ ನಿರೂಪಿಸಿದರು, ಪ್ರಗ್ನಾö್ಯ ಆರ್.ಕೆ. ಮತ್ತು ದೇವಾಂಗಣ ಎನ್. ಆರ್. ಪ್ರಾರ್ಥಿಸಿದರು ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು ಉಜ್ವಲ್ ನಿಟ್ಟೆ ವಂದಿಸಿದರು.
ತ್ರಿವರ್ಣ ಕಲಾ ಕೇಂದ್ರ ಮಣಿಪಾಲ, ಕುಂದಾಪುರ, ಆನ್ಲೆöÊನ್ ತರಗತಿಯಲ್ಲಿ ಆದ್ಯಯನ ಗೈಯಲಿರುವ ೧೯ ರಿಂದ ೭೫ ವಯೋಮಿತಿಯ ಪ್ರಿತಿಭಾನ್ವಿತ ಅಯ್ದ ೬೩ ವಿದ್ಯಾರ್ಥಿ ಕಲಾವಿದರ ೬೩ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದೆ.
ಬಾಗವಹಿಸಿರುವ ವಿದ್ಯಾರ್ಥೀ ಕಲಾವಿದರು:- ಅಭಿನಯ ನಾಯಕ್, ಅಂಬಿಕಾ ಶೆಟ್ಟಿ, ಅನಿರುಧ್ಧ ಅನಂದ್, ಅನುಷಾ ಆಚಾರ್ಯ, ಅಶ್ವಿನಿ ಶೆಟ್ಟಿ, ಕೆರೊಲಿನ್ ಡಿಸೋಜಾ, ಚೇತನಾ ಗಣೇಶ್, ದೇವಿಕ್ತಾ ಹೆಗ್ಡೆ, ಡಾ. ಜಿ.ಎಸ್.ಕೆ. ಭಟ್, ಹರ್ಷಿತ್ ಶೆಟ್ಟಿ, ಹೈಮಾ ಮಟೇಟಿ, ಗಣೇಶ್ ಶೆಟ್ಟಿ, ಪ್ರಸಾದ್ ಆರ್. ರಕ್ಷಿತಾ ಶೆಟ್ಟಿ, ಸಂಪ್ರಧಾ ರಾವ್, ಸಂತೋಷ್ ಎಂ. ಭಟ್, ಸಪ್ನಾ ಪ್ರಭು, ಶೋಭಾ ಆರ್. ಮಲ್ಯ, ಶ್ವೇತಾ, ಡಾ. ಸುಮಿತ್ ಕೌರ್ ದಿಲ್, ಸುಚಿತಾ ವಿನೋದ್, ಸುಷ್ಮಾ ಪೂಜಾರಿ, ಟಿ.ವಿ. ಸಸ್ಯ, ಸುಷ್ಮಾ ಪ್ರಭು, ಉಜ್ವಲ್ ನಿಟ್ಟಿ, ವಿಧು ಶಂಕರ್ ಬಾಬು, ಯಶಾ, ಅದಿಥಿ ಎನ್.ಯು., ಅಭಿನವ್ ಪ್ರಸನ್ನ, ಆದಿತ್ಯ ವೈ. ಆಚಾರ್ಯ, ಆದಿತ್ಯ ಸುಬೃಹ್ಮಣ್ಯ, ಆಯಿಷಾ ರಫಾ, ಆತ್ರಾಡಿ ಕಾವ್ಯರಾಜ್ ಹೆಗ್ಡೆ, ಅನ್ವಿತಾ, ಅಥರ್ವ ನಾವಡ, ಅವನಿ ಎಂ. ಮೆಸ್ತಾ, ದ್ರುವ್ ಗುರು ಪ್ರಸಾದ್, ದೇವಾಂಗಣ ಎನ್. ಆರ್. ಹರ್ಷಿಣಿ, ಜ್ನಾನ, ಜೋರ್ಡಾನ್ ಕ್ರೋಡ, ಮನಸ್ವಿ ನಾಯಕ್, ಮೆಹಕ್ ಎಂ. ಮುನಾಝಾ ಝೋಹ್ರ, ಪ್ರಗ್ನಾö್ಯ ಆರ್.ಕೆ., ಪ್ರಾರ್ಥನಾ ಎಂ., ಪ್ರಥ್ವಿ, ರೋಶ್ನಿ ಆರ್., ಸಾನ್ವಿ ಪಾಲನ್, ಸಾತ್ವಿಕ್ ಡಿ. ಪ್ರಭು, ಸಂಜನಾ ಎಸ್, ಸಾನ್ವಿ ನಾಯಕ್, ಸಾನ್ವಿ ಎಸ್, ಸಾನ್ವಿ ಸಂತೋಷ್ ಕಾಮತ್, ಸಾರ್ಥಕ್ ಎಸ್, ಸಾತ್ವಿಕ್ ಎಸ್, ಸಂಸ್ಕೃತಿ ಹೆಚ್. ಎ., ಶ್ರೇಯಾ ನಾಂiÀiಕ್, ಶ್ರೀ ಹರ್ಷಿನಿ, ಸ್ನೇಹಿಲ್ ಶೆಟ್ಟಿ, ತೇಜಸ್ ಅಂಕೋಲಾ, ವೈನವಿ ಆರ್., ಯಶಸ್ವಿನಿ.
ಕಲಾಕೃತಿಗಳು :-
ಬುದ್ಧ, ಯಕ್ಷಗಾನ ಸ್ತ್ರೀ ವೇಷಧಾರಿ, ಹಳ್ಳಿ ಹಟ್ಟಿಯ ಪಶುಸಂಗೋಪನೆ, ಬಟ್ಟೆ ಒಗೆಯುವ ಮಹಿಳೆ, ಬಂದರು, ಬಸದಿ, ಶ್ರೀ ಕೃಷ್ಣ, ಬುಡಕಟ್ಟು ಮಹಿಳೆ, ಎತ್ತಿನ ಗಾಡಿ, ರೈತ, ಜಲಪಾತ, ಅಳಿಲು, ದೋಣಿ, ರಾಧಾ ಕೃಷ್ಣ ಮುಂತಾದ ವಿವಿಧ ಮಜಲುಗಳನ್ನು ಪರಿಚಯಿಸುವ ಅಕ್ರಾಲಿಕ್ ಕ್ಯಾನ್ವಾಸ್ ೧೪, ಜಲರ‍್ಣ ೪, ಪೋಸ್ಟರ್ ರ‍್ಣ ೪, ಚರ‍್ಕೋಲ್ ಶೇಡಿಂಗ್ ೨೦, ಪೆನ್ಸಿಲ್ ಶೇಡಿಂಗ್ ೬, ಆಯ್ಲ್ ಪೇಸ್ಟ್ಲ್ ನ ಶೇಡಿಂಗ್ ಮತ್ತು ಕಲರಿಂಗ್ ನ ೧೫ ಕಲಾಕೃತಿಗಳು
ಪ್ರದರ್ಶನದ ವಿಶೇಷತೆ:- · ಕೇಂದ್ರದ ೧೯ ವರ್ಷದಿಂದ ೭೫ ವಯೋಮಾನದ ಹಿರಿಯರ ವಿಭಾಗದ ೨೭ ವಿದ್ಯಾರ್ಥಿಯರು ಮತ್ತು ೫ ರಿಂದ ೧೮ ವರ್ಷದವರೆಗಿನ ಕಿರಿಯರ ವಿಭಾಗದ ೩೬ ಕಲಾವಿದ್ಯಾರ್ಥಿಯರ ಭಾಗಿತ್ವ. · ಒಟ್ಟು ೬೩ ಕಲಾ ವಿದ್ಯಾರ್ಥಿಯರ ೬೩ ಕಲಾಕೃತಿಗಳು ಆಯ್ಕೆ. · ಪ್ರತಿಯೊಬ್ಬರ ತಲಾ ಒಂದರAತೆ ಅಕ್ರಾಲಿಕ್, ಪ್ಯಾಲೆಟ್ ನೈಫ್, ಜಲವರ್ಣ, ಪೋಸ್ಟರ್ ವರ್ಣ, ಪೆನ್ಸಿಲ್, ಚಾರ್ಕೋಲ್, ಪೇಸ್ಟಲ್ ಶೇಡಿಂಗ್ ಸೇರಿದಂತೆ ಬೇಸಿಕ್ ಕೃತಿಯ ಮೂಲಕ ಪ್ರತಿಭೆಯ ಕೃತಿಗೆ ಸ್ಪಂದನೆ. · ಕಲಾ ಪ್ರದರ್ಶನದ ಮೂಲಕ ವಿದ್ಯಾರ್ಥಿಯರಿಗೆ ಮತ್ತು ಸಾರ್ವಜನಿಕರಿಗಾಗಿ ಕಲಾಸ್ಪೂರ್ತಿಯನ್ನು ಬೆಸೆಯುವ ವೇದಿಕೆ. · ಕಲಾವಿದ, ಕಲಾಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಡಿಯಲ್ಲಿ ರಚಿಸಿರುವ ಚಿತ್ರಕೃತಿ. · ಬೆಳಿಗ್ಗೆ ೧೦.೦೦ರಿಂದ ಸಂಜೆ ೭.೦೦ರ ತನಕ ಸಾರ್ವಜನಿಕ ಮುಕ್ತ ವೀಕ್ಷಣೆಗೆ ಅವಕಾಶ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.