



ಪ್ರಸ್ತುತ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಹಾಗು ಈಗ ಟೈಲರಿಂಗ್ ಕ್ಷೇತ್ರ ಬಹಳ ಮುಂದುವರೆದಿದೆ ದಿನಕ್ಕೊಂದು ರೀತಿಯ ಹೊಸ ಹೊಸ ವಿನ್ಯಾಸಗಳು, ಎಂಬ್ರಾಯ್ಡರಿ ಡಿಸೈನರ್ ಬಟ್ಟೆಗಳು ಮಾರುಕಟ್ಟೆಗೆ ಬಂದಿದೆ. ಹಾಗಾಗಿ ಮಹಿಳೆಯರು ಇಂತಹ ಕ್ಷೇತ್ರಗಳಲ್ಲಿ ಕೌಶಲಗಳನ್ನು ಕಲಿತು ಪರಿಪೂರ್ಣತೆಯನ್ನು ಹೊಂದಿ ಸ್ವಉದ್ದೆಮೆಯನ್ನು ಸ್ಥಾಪಿಸಬೇಕು ಎಂದು ಕಾರ್ಕಳದ ಶಿಕ್ಷಣ ಸಂಪನ್ಮೂಲ ಕೇಂದ್ರದ ತರಬೇತುದಾರದಾದ ಶೋಭಾ ಭಾಸ್ಕರ್ ಹೇಳಿದರು. ಕಾರ್ಕಳದ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ನಬಾರ್ಡ್ ಇವರ ಸಹಯೋಗದಲ್ಲಿ 15 ದಿನಗಳ ಫ್ಯಾಬ್ರಿಕ್ ಪೈಟಿಂಗ್ ಹಾಗೂ ಆರಿ ಎಂಬ್ರಾಯ್ಡರಿ ಉಚಿತ ತರಬೇತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಾರ‍್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ, ಬಿವಿಟಿಯ ಹಿರಿಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಮತ್ತು ಕಾರ‍್ಯಕ್ರಮ ಅಧಿಕಾರಿ ಪ್ರತಿಮಾ ಉಪಸ್ಥಿತರಿದ್ದರು. ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನಾ ಸ್ವಾಗತಿಸಿದರು. ಲಾವಣ್ಯ ನಿರೂಪಿಸಿ, ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.