



ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ "ಹೊಸಾಡು ಸೇವಾ ಸಹಕಾರ ಸಂಘ (ನಿ.)" ವು ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಇದೇ ಫೆ.6ರ ಭಾನುವಾರ ಬೆಳಿಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೂತನ ಸಂಘವನ್ನು ಉದ್ಘಾಟಿಸುವರು.
ಹೊಸಾಡು ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಾಡೇರಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ.
ಹೆಚ್. ವಿಶ್ವೇಶ್ವರ ಅಡಿಗ, ಅಡಿಗರ ಮನೆ ಹೊಸಾಡು, ಮಂಜಯ್ಯ ಶೆಟ್ಟಿ ಜಾಜಿಮಕ್ಕಿ ಹೊಸಾಡು, ಕೃಷ್ಣ ನಾಯ್ಕ್, "ಕೃಷ್ಣಾನುಗ್ರಹ" ಅರಾಟೆ ಹೊಸಾಡು, ಶೇಖರ ಶೆಟ್ಟಿ ಕಾಡೇರಿಮನೆ ಹೊಸಾಡು, ಪ್ರದೀಪ್ ಶೆಟ್ಟಿ ಕಟ್ಟಡ ಮಾಲೀಕರು, ಬಾಲಾಜಿ ಕಾಂಪ್ಲೆಕ್ಸ್, ಮುಳ್ಳಿಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ನಿರ್ದೇಶಕರುಗಳಾದ ಚಂದ್ರಶೇಖರ, ದಿನೇಶ್ ಜೋಗಿ, ಸತೀಶ್ ಶೆಟ್ಟಿ, ಶಶಿಧರ ಅಡಿಗ, ಪ್ರದೀಪ ಬಿಲ್ಲವ, ರಾಮ ಗಾಣಿಗ, ಶರತ್ ಕುಮಾರ್ ಶೆಟ್ಟಿ, ನವೀನ ಎಸ್. ಫೆರ್ನಾಂಡಿಸ್, ರೇಖಾ ಪುತ್ರನ್, ಅಕ್ಷತಾ ರವೀಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸರಫರ ಪ್ರದೀಪ್ ಆಚಾರ್ಯ ಅವರು ಉಪಸ್ಥಿತರಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.