



ಉಡುಪಿ: ಕಲ್ಯಾಣಪುರ ಸಂತೆಕಟ್ಟೆ ಮೋಹಿನಿ ಟವರ್ ನಲ್ಲಿ ಬೆಂಗಳೂರಿನ ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿಯ ಪ್ರಥಮ ಶಾಖೆ ಜೂ.29 ರಂದು ಉದ್ಘಾಟನೆಗೊಂಡಿತು.

ಸೊಸೈಟಿಯ ಪ್ರಥಮ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಮಾಣಿಕತೆ, ನಂಬಿಕೆ, ಶ್ರದ್ಧೆಯ ಆಧಾರದ ಮೇಲೆ ಸಂಘ- ಸಂಸ್ಥೆಗಳು ಬೆಳಕಿಗೆ ಬಂದು ಸಮಾಜಕ್ಕೊಂದು ಶಕ್ತಿ ನೀಡುತ್ತವೆ. ಅದೇ ರೀತಿಯಲ್ಲಿ ಸಹಕಾರ ಸಂಘಗಳು ರಾಷ್ಟ್ರೀಕೃತ ಸಂಸ್ಥೆಗಿಂತಲೂ ಹೆಚ್ಚಿನ ಶಕ್ತಿ ಹೊಂದಿದೆ. ಗ್ರಾಹಕರ ವಿಶ್ವಾಸ, ನಂಬಿಕೆಯ ಆಧಾರದಲ್ಲಿ ಸಾಲ ನೀಡಿ ತಮ್ಮತ್ತ ಸೆಳೆಯುವಂತಹ ಎಷ್ಟೋ ಸಹಕಾರಿ ಸಂಸ್ಥೆಗಳಿವೆ. ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಸ್ಥಾಪನೆಗೊಂಡ ಸೊಸೈಟಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಕಚೇರಿ ಉದ್ಘಾಟಿಸಿದ ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಹಿರಿಯರು ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಮತ್ತು ಸುಲಭ ರೀತಿಯಲ್ಲಿ ಸಾಲ, ಸೌಲಭ್ಯ ದೊರಕಬೇಕೆಂಬ ಉದ್ದೇಶದಿಂದ ಸಹಕಾರ ಸಂಘವನ್ನು ನಿರ್ಮಿಸಿದ್ದರು ಎಂದರು.
ಶಂಕರಪುರ ಶ್ರೀ ಸಾಯಿ ಸಾಂತ್ವನ ಮಂದಿರದ ಸಾಯಿ ಈಶ್ವರ ಗುರೂಜಿ ಅವರು, ನಾರಾಯಣಗುರುಗಳು ಹಿಂದುಳಿದ ಜನರಿಗೆ ಬದುಕು ತೋರಿಸಿ ಕೊಟ್ಟವರು. ಸಾವಿರಾರು ಜನರಿಗೆ ಉದ್ಯೋಗಕ್ಕಾಗಿ ಇಂತಹ ಸಂಸ್ಥೆಗಳನ್ನು ನಿರ್ಮಿಸಲು ಅವಕಾಶ ಮಾಡಿದವರು. ಅವರ ಆದರ್ಶ ಮಾನವೀಯತೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗಣಕಯಂತ್ರವನ್ನು ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಭದ್ರತಾ ಕೋಶವನ್ನು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಉದ್ಘಾಟಿಸಿದರು. ಉಳಿತಾಯ ಖಾತೆ ಪುಸ್ತಕವನ್ನು ಮಾಜಿ ಶಾಸಕ ಕೆ. ರಘುಪತಿ ಭಟ್, ಎಸ್ಎನ್ ಜವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿತರಿಸಿದರು. ಮಿರಖು ಠೇವಣಿ ಪತ್ರವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ವಿತರಿಸಿದರು.
ಮಾಂಡವಿ ಬಿಲ್ಡರ್ಸ್ ನ ಜೆರ್ರಿ ವಿನ್ಸೆಂಟ್ ಡಯಸ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಕಲ್ಮಾಡಿ ಶ್ರೀ ಬ್ರಹ್ಮಬೈದೇರುಗಳ ಗರೋಡಿ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಕಟ್ಟಡ ಮಾಲಕ ಶ್ಯಾಮ ಕೆ. ಪೂಜಾರಿ, ಎಸ್ ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ರಾಜು ಪೂಜಾರಿ, ಸಂಸ್ಥೆಯ ಉಪಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್, ನಿರ್ದೇಶಕರಾದ ಗಂಗಾಧರಪ್ಪ ವಿ., ಸುರೇಶ್ ಎನ್. ಪೂಜಾರಿ, ಕಿಶನ್ ಪೂಜಾರಿ, ಶಿವರಾಜ್ ಎಂ.ಎಸ್., ಕಾಂತರಾಜ್ ಎಲ್., ಲಕ್ಷ್ಮಣ ಇಳಗೇರ, ಶಿವರಾಜ್ ಕೆ.ಇ., ಗುರುರಾಜ ಪಿ., ರಾಕೇಶ ಪೂಜಾರಿ, ವಿನಯಕುಮಾರ್, ಆದರ್ಶ ಕುಮಾರ್, ಭಾರತಿ ಆರ್., ಶ್ರುತಿ ರಾಕೇಶ್, ವೃತ್ತಿಪರ ನಿರ್ದೇಶಕರಾದ ಗೀತಾಂಜಲಿ ಎಂ.ಸುವರ್ಣ, ಮಂಜುಳಾ ಆರ್.ನಾಯ್ಕ್, ಪ್ರಧಾನ ವ್ಯವಸ್ಥಾಪಕ ರಾಕೇಶ ಬಿ.ಎಲ್., ಪ್ರಭಾರ ವ್ಯವಸ್ಥಾಪಕ ನಿತೇಶ್ ಡಿ. ಉಪಸ್ಥಿತರಿದ್ದರು. ನಿರ್ದೇಶಕ ರಾಜು ಪೂಜಾರಿ ಉಪ್ಪೂರು ಸ್ವಾಗತಿಸಿ, ಸ್ಮಿತೇಶ ನಿರೂಪಿಸಿದರು. ಪ್ರಕಾಶ್ ಕೋಟ್ಯಾನ್ ವಂದಿಸಿದರು.




ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.