



ಕಾರ್ಕಳ: ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಘಟಕ ನಾಲ್ಕು ವರ್ಷಗಳಿಂದ ಮಾಡುತ್ತಿರುವ ಸಮಾಜಮುಖೀ ಕಾರ್ಯಗಳು ಶ್ಲಾಘನೀಯವಾಗಿದೆ.ಈಗ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ "ರೆಡ್ ಕ್ರಾಸ್ ಸಪ್ತಾಹ 2022" ರ ಮೂಲಕ ಇನ್ನಷ್ಟು ಸಮುದಾಯದ ಸೇವೆ ಮಾಡಲು ಉತ್ತಮ ಅವಕಾಶ ಎಂದು ರೆಡ್ ಕ್ರಾಸ್ ಸೊಸೈಟಿ ತಾಲೂಕು ಘಟಕದ ಅಧ್ಯಕ್ಷರೂ ಕಾರ್ಕಳ ತಾಲೂಕು ತಹಸೀಲ್ದಾರರೂ ಆದಂತಹ ಪ್ರದೀಪ್ ಕುರ್ಡೇಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಶತಮಾನೋತ್ಸವದ ಅಂಗವಾಗಿ ಕಾರ್ಕಳ ಘಟಕದ ವತಿಯಿಂದ ಹಮ್ಮಿಕೊಂಡಿರುವ "ರೆಡ್ ಕ್ರಾಸ್ ಸಪ್ತಾಹ 2022" ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಕಳ ಘಟಕದ ಚೇರ್ಮನ್ ಡಾ.ಕೆ .ಆರ್. ಜೋಶಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಘಟಕವು ಈವರೆಗೆ ಮಾಡಿರುವ ಕಾರ್ಯಕ್ರಮಗಳ ಮಾಹಿತಿಯನ್ನು ನೀಡುತ್ತಾ ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯಅತಿಥಿ ಪ್ರೊ. ಪದ್ಮನಾಭ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗೀತಾ ಕಾಮತ್ ಪ್ರಾರ್ಥಿಸಿದರು. ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.