logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು ಕ್ರೆಡಾಯ್ ಮಹಿಳಾ ವಿಭಾಗದ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
2 Oct 2023
post image

ಮಂಗಳೂರು: ನಗರದ ಓಶಿಯನ್ ಪರ್ಲ್ನಲ್ಲಿ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ವಿಭಾಗದ ಕ್ರೆಡಾಯ್ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯೂ) ಉದ್ಘಾಟನೆಯು ಅದ್ದೂರಿಯಾಗಿ ನಡೆಯಿತು.

ಗೌರವಾನ್ವಿತ ಮುಖ್ಯ ಅತಿಥಿಗಳಾದ ಶ್ರೀ ಮುಲೈ ಮುಹಿಲನ್ ಎಮ್.ಪಿ., ಐ.ಎ.ಎಸ್.,  ದ.ಕ ಜಿಲ್ಲೆಯ ಜಿಲ್ಲಾಧಿಕಾರಿಗಳು, ಗೌರವ ಅತಿಥಿಗಳಾದ ಶ್ರೀ ಪ್ರದೀಪ್ ರಾಯ್ಕರ್, ಕ್ರೆಡಾಯ್ ಕರ್ನಾಟಕದ ಅಧ್ಯಕ್ಷರು ಮತ್ತು ಸಿಡಬ್ಲ್ಯೂಡಬ್ಲ್ಯೂ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಸಾರಾ ಜೇಕಬ್ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಸಿಡಬ್ಲ್ಯೂಡಬ್ಲ್ಯೂ ಮಂಗಳೂರು ವಿಭಾಗದ ಸಂಯೋಜಕರಾದ ಶ್ರೀಮತಿ ಕೃತೀನ್ ಅಮೀನ್, ಸಿಡಬ್ಲ್ಯೂಡಬ್ಲ್ಯೂ ಮಂಗಳೂರು ವಿಭಾಗದ ಕಾರ್ಯದರ್ಶಿ ಶ್ರೀಮತಿ ರಜನಿ ಪತ್ರಾವೊ ಉಪಸ್ಥಿತರಿದ್ದರು.

ಖಜಾಂಚಿ ಶ್ರೀ ಸುದೀಶ್ ಕರುಣಾಕರನ್ ಅವರು ಸ್ವಾಗತಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ರೆಡಾಯ್ ಮಂಗಳೂರು ವಿಭಾಗದ ಅಧ್ಯಕ್ಷರಾದ ಶ್ರೀ ವಿನೋದ್ ಪಿಂಟೊ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀಮತಿ ರಜನಿ ಪತ್ರಾವೊ ಅವರನ್ನು ಸಿಡಬ್ಲ್ಯೂಡಬ್ಲ್ಯೂ ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಮತ್ತು ಶ್ರೀಮತಿ ಕೃತೀನ್ ಅಮೀನ್ ಸಂಯೋಜಕಿಯ ಹುದ್ದೆಯನ್ನು ವಹಿಸಿಕೊಂಡರು. ಈ ಸಮಾರಂಭದಲ್ಲಿ ಶ್ರೀಮತಿ ಸಾರಾ ಜೇಕಬ್ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜರಗಿತು.

ಸಿಡಬ್ಲ್ಯೂಡಬ್ಲ್ಯೂ ಮಂಗಳೂರು ವಿಭಾಗದ ಸಂಯೋಜಕರಾದ ಶ್ರೀಮತಿ ಕೃತೀನ್ ಅಮೀನ್ ಅವರು ಮಹಿಳಾ ನಾಯಕತ್ವದ ಬಗ್ಗೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ಪ್ರಸ್ತುತಪಡಿಸಿದರು.

ಕ್ರೆಡಾಯ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಪ್ರದೀಪ್ ರಾಯ್ಕರ್, ಸಿಡಬ್ಲ್ಯೂಡಬ್ಲ್ಯೂ ಆರಂಭಿಸಿದ ಕಾರ್ಯಗಳು, ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಕ್ರಮಗಳ ಒಳನೋಟಗಳನ್ನು ಹಂಚಿಕೊಂಡರು, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಕಲ್ಯಾಣಕ್ಕೆ ಕ್ರೆಡಾಯ್ ಬದ್ಧತೆಯನ್ನು ವಿವರಿಸಿದರು. ಶ್ರೀಮತಿ ಸಾರಾ ಜೇಕಬ್, ಸಿಡಬ್ಲ್ಯೂಡಬ್ಲ್ಯೂ ರಾಷ್ಟ್ರೀಯ ಕಾರ್ಯದರ್ಶಿ, ಸಿಎಸ್ಆರ್ ಚಟುವಟಿಕೆಗಳು, ಆರ್ಥಿಕತೆ ಸುಸ್ಥಿರತೆಯ ಆನ್‌ಲೈನ್ ತರಗತಿಗಳು ಮತ್ತು ಕಾರ್ಮಿಕ ಅಭಿವೃದ್ಧಿಗೆ ಮಹಿಳೆಯರ ಅಮೂಲ್ಯ ಕೊಡುಗೆ ಕುರಿತು ಚರ್ಚಿಸಿದರು.

ಮುಖ್ಯ ಅತಿಥಿಗಳಾದ ಮಂಗಳೂರು ಜಿಲ್ಲಾಧಿಕಾರಿ ಶ್ರೀ ಮುಲೈ ಮುಹಿಲನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಮುಲೈ ಮುಹಿಲನ್ ಎಮ್.ಪಿ., ಐ.ಎ.ಎಸ್., ದ.ಕ. ಜಿಲ್ಲಾಧಿಕಾರಿಯವರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದರು.

ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸಿ ಎಲ್ಲ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಡಲಾಯಿತು. ಸಿಡಬ್ಲ್ಯೂಡಬ್ಲ್ಯೂ ಕಾರ್ಯದರ್ಶಿ ಶ್ರೀಮತಿ ರಜನಿ ಪತ್ರಾವೊ ಅವರು ಧನ್ಯವಾದಗಳನ್ನು ಅರ್ಪಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.