



ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 18 ಸಾವಿರ ಕ್ಕಿಂತ ಅಧಿಕ ಮತಗಳಿಂದ ಎರಡನೇ ಬಾರಿಗೆ ಗೆದ್ದು ಕರಾವಳಿಯ ಯುವ ಶಕ್ತಿಯಾಗಿ ಶಾಸಕ ಹರೀಶ್ ಪೂಂಜ ಹೊರಹೊಮ್ಮಿದ್ದಾರೆ. 81 ಗ್ರಾಮಗಳ ಜನತೆಗೆ ಸ್ಪಂದಿಸಿ ರಾಜ್ಯದಲ್ಲಿ ಬೆಳ್ತಂಗಡಿ ಯನ್ನು ಮಾದರಿ ಕ್ಷೇತ್ರವಾಗಿಸಬೇಕು ಎಂಬ ಕಲ್ಪನೆ, ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿ ಬೆಳ್ತಂಗಡಿಮಣ್ಣಿನ ಆಶೋತ್ತರಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಬೆಳ್ತಂಗಡಿಯಲ್ಲಿರವಿವಾರ ಹರೀಶ್ ಪೂಂಜ ಅವರ ಕಚೇರಿ ‘ಶ್ರಮಿಕ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಮಿಕ ಕಚೇರಿ ಬೆಳ್ತಂಗಡಿಯ ಶ್ರಮಜೀವಿಗಳ ಬೆಳಕಿನ ಅರಮನೆಯಾಗಲಿ ಎಂದು ಹಾರೈಸಿದರು.
ತುಳು ಲಿಪಿಯ ಫಲಕ
ತುಳುನಾಡಿನ ಭಾಷೆ, ಸಂಸ್ಕೃತಿಗೆ ಗೌರವ ನೀಡುವ ಸಲುವಾಗಿ ಪೂಂಜ ಮೊದಲ ಬಾರಿ ಶಾಸಕರಾದಲೇ ತುಳು ಲಿಪಿಯಲ್ಲಿ ಶ್ರಮಿಕ ಕಚೇರಿಯ ನಾಮ ಫಲಕ ಅಳವಡಿಸಿದ್ದರು. ಈಗಲೂ ಅದೇ ಫಲಕವನ್ನು ಉಳಿಸಿಕೊಂಡಿದ್ದಾರೆ.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಕಚೇರಿಯನ್ನು ಉದ್ಘಾಟಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಡಲ ಉಪಾಧ್ಯಕ್ಷ ಸೀತಾ ರಾಮ ಬೆಳಾಲು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ ಗೌಡ, ಶ್ರೀನಿವಾಸ ರಾವ್, ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಡಾ| ಎಂ.ಎಂ. ದಯಾಕರ, ಅಳದಂಗಡಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಎಸ್.ಟಿ. ಮೋರ್ಚ ಜಿಲ್ಲಾಧ್ಯಕ್ಷ ಚೆನ್ನಕೇಶವ 3 ಅರಸಮಜಲು, ತಾ.ಪಂ. ಮಾಜಿ ಸದಸ್ಯರಾದ ಕೊರಗಪ್ಪಗೌಡ, ಕೃಷ್ಣಯ ಆಚಾರ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಜಯಂತ್ ಗೌಡ, ಮುತ್ತಣ್ಣ ಪೂಂಜ, ಸ್ವೀಕೃತಾ, ನಳಿನಿ ಪೂಂಜ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.