logo
WhatsApp Image 2026-04-02 at 14.46.04.jpeg
hindalco everlast.jpeg

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ

ಟ್ರೆಂಡಿಂಗ್
share whatsappshare facebookshare telegram
4 Jul 2026
post image

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ 2026-27ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂನ್ 30ರಂದು ಪೆರುವಾಜೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ರೋಟರಿ ಜಿಲ್ಲೆ 3181ರ ವಲಯ-02ರ ಸಹಾಯಕ ಗವರ್ನರ್ ರೊ. ಸಂದೀಪ್ ರಾವ್ ಇಡ್ಯ ಪದಗ್ರಹಣ ಅಧಿಕಾರಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್ ಅವರು ನೂತನ ಅಧ್ಯಕ್ಷ ರೊ. ಮಂಜುನಾಥ್ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ರೊ. ಸುರೇಶ್ ನಾಯಕ್, ವಲಯ ಸೇನಾನಿ ರೊ. ಕೃಷ್ಣ ಪ್ರಸಾದ್, ನಿಕಟಪೂರ್ವ ಸಹಾಯಕ ಗವರ್ನರ್ ರೊ. ವಿಘ್ನೇಶ್ ಶಣೈ, ನಿಕಟಪೂರ್ವ ವಲಯ ಸೇನಾನಿ ರೊ. ಪ್ರಶಾಂತ್ ಬೆಳಿರಾಯ ಹಾಗೂ ಕ್ಲಬ್ ಮಾರ್ಗದರ್ಶಕ ರೊ. ಡಾ. ಭರತೇಶ್ ಆದಿರಾಜ್ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ರೊ. ಸುರೇಂದ್ರ ನಾಯಕ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರೆ, ಕಾರ್ಯದರ್ಶಿ ರೊ. ರಾಘವೇಂದ್ರ ಕಾಮತ್ ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷ ರೊ. ಮಂಜುನಾಥ್ ಹೆಗ್ಡೆ ಕಾರ್ಯಕಾರಿ ಸಮಿತಿಯನ್ನು ಪರಿಚಯಿಸಿ ಮುಂದಿನ ಸಾಲಿನ ಕಾರ್ಯಯೋಜನೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯ ರೊ. ರಾಜೇಶ್ ಕುಂಟಾಡಿ ಅವರ ಪತ್ನಿ ವಿದ್ಯಾ ರಾಜೇಶ್ ಅವರು ಪಿಎಚ್‌ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ರೊ. ಸುರೇಶ್ ನಾಯಕ್ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ಕ್ಲಬ್ ಬುಲೆಟಿನ್ 'ಲೋಕಹಿತಂ' (Lokahitham) ಬಿಡುಗಡೆ ಮಾಡಲಾಯಿತು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕಗಳು ಹಾಗೂ ಪಡಿಬೆಟ್ಟು ಅಂಗನವಾಡಿ ಶಾಲೆಗೆ ಪೀಠೋಪಕರಣಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಆಂಶ್ ಅಶೋಕ್ ಸಾಲ್ಯಾನ್ ಹೆರ್ಮುಂಡೆ ಹಾಗೂ ಅನನ್ಯ ಕಾರ್ಕಳ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಮುಖ್ಯ ಅತಿಥಿ ರೊ. ಸಂದೀಪ್ ರಾವ್ ಇಡ್ಯ ಅವರು ಪರಿಸರ ಸಂರಕ್ಷಣೆ, ಜಲ ಸಂಪನ್ಮೂಲಗಳ ಮಹತ್ವ ಹಾಗೂ ರೋಟರಿ ಸಂಸ್ಥೆಯ ಸಮಾಜಮುಖಿ ಸೇವೆಗಳ ಕುರಿತು ಮಾತನಾಡಿದರು. ವಿವಿಧ ರೋಟರಿ ಕ್ಲಬ್‌ಗಳ ಪ್ರತಿನಿಧಿಗಳು ಹಾಗೂ ವಿಶೇಷ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೊ. ಉಪೇಂದ್ರ ವಾಗ್ಲೆ ಅತಿಥಿಗಳನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಗಣೇಶ್ ಬರ್ಲಾಯ ವಂದಿಸಿದರು. ರೊ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.