



2012 ರಲ್ಲಿ ಬೆಂಗಳೂರು ನಗರದಲ್ಲಿಆರಂಭಗೊಂಡಿದ್ದ ನೋವಿಗೋ ಸೊಲ್ಯುಶನ್ಸ್ ಎನ್ನುವ ಹೆಸರಾಂತ ಐಟಿ ಕಂಪನಿ ಇದೀಗ ನಗರದ ಫಳ್ನೀರ್ ನಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಬಿಪಿಎಮ್ ಲಿ.ಸಿಇಒ & ಎಂ.ಡಿ, ಎಕ್ಸಿಕ್ಯೂಟೀವ್, ಉಪಾಧ್ಯಕ್ಷ ಅನಂತ ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂರು ವರ್ಷಗಳಲ್ಲಿ ಅಮೋಘ ಸಾಧನೆ: ಮಂಗಳೂರಿನಲ್ಲಿ ನೋವಿಗೋ ಸೊಲ್ಯುಶನ್ಸ್ ಕಂಪನಿ ಪ್ರಬಲವಾಗಿ ಬೆಳೆಯುತ್ತಿದ್ದು ಮೂರು ವರ್ಷಗಳಲ್ಲಿ ಅಮೋಘ ಸಾಧನೆ ದಾಖಲಿಸಿದೆ. ದುಬೈ, ಯುಎಇ, ಯುಕೆ, ಸಿಂಗಾಪುರದಲ್ಲಿ ಶಾಖೆ ಹೊಂದಿದ್ದು ಡಲ್ಲಾಸ್ ಟೆಕ್ಸಾಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮಂಗಳೂರು, ಬೆಂಗಳೂರು, ಚೆನ್ನೈ ಮತ್ತು ಕೊಚ್ಚಿಯಲ್ಲಿ ಶಾಖೆ ವಿಸ್ತರಿಸುತ್ತಿದ್ದು, ಮುಂದಿನ ವರ್ಷದಲ್ಲಿ ಕೆನಡಾ, ಕತಾರ್, ನೆದರ್‌ಲ್ಯಾಂಡ್ ದೇಶದಲ್ಲಿ ಹೊಸ ಶಾಖೆಯು ಕಾರ್ಯಾಚರಿಸಲಿದೆ.
2025 ರ ವೇಳೆಗೆ 1500 ಕ್ಕೂ ಹೆಚ್ಚು ಉದ್ಯೋಗ ದೊರಕಿಸುವ ಯೋಜನೆ ಹೊಂದಿದೆ. ಪ್ರಸ್ತುತ 700 ಕ್ಕೂ ಅಧಿಕ ಐಟಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮಂಗಳೂರು ನಗರದ ಫಳ್ನೀರ್ ನಲ್ಲಿ ಕರುಣಾ ಪ್ರೈಡ್ ಸೆಂಟರಿನ ಐದನೇ ಮಹಡಿಯಲ್ಲಿ ಹೊಸ ಶಾಖೆ ಆರಂಭಿಸುತ್ತಿದೆ. ಮಂಗಳೂರಿನ ಪ್ರವೀಣ್ ಕುಮಾರ್ ಕಲ್ಬಾವಿ, ನೊವಿಗೋ ಸೊಲ್ಯುಶನ್ಸ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಆಗಿದ್ದು, ಚೀಫ್ ಟೆಕ್ನೋಲಜಿ ಆಫೀಸರ್ ಮತ್ತು ಸಹ ಸಂಸ್ಥಾಪಕ ಮೊಹಮ್ಮದ್ ಹನೀಫ್, ಚೀಫ್ ಆಪರೇಟಿಂಗ್ ಆಫೀಸರ್ ಮತ್ತು ಸಹ ಸಂಸ್ಥಾಪಕ ಮೊಹಮ್ಮದ್ ಜರೋದ್, ಚೀಫ್ ಕಸ್ಟಮರ್ ಆಫೀಸರ್ ಮತ್ತು ಸಹ ಸಂಸ್ಥಾಪಕ ಶಿಹಾಬ್ ಕಲಂದರ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.