



ಕಾರ್ಕಳ: ಕಾರ್ಕಳ ಬೈಲೂರಿನಲ್ಲಿ ಜ.27-29 ರವರೆಗೆ ನಡೆಯುವ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಯ ಪೂರ್ವಭಾವಿಯಾಗಿ ವಿದ್ಯುತ್ ದೀಪಾಲಂಕಾರದ ಉದ್ಘಾಟನೆ ಬೈಲೂರು ಮುಖ್ಯ ಪೇಟೆಯ ವಠಾರದಲ್ಲಿ ನಡೆಯಿತು. ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ದೀಪಾಲಂಕಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಉಡುಪಿ ಎಸ್ ಪಿ ಅಕ್ಷಯ್ ಮಚಿಂದ್ರ , ಮೆಸ್ಕಾಂ ಎಂಡಿ ಮಂಜಪ್ಪ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್ ಹಾಗೂ ರಮೇಶ್ ಕಲ್ಲೊಟ್ಟೆ ಉಪಸ್ಥಿತರಿದ್ದರು. ವಿದ್ಯುತ್ ದೀಪಾಲಂಕಾರವು ಕಾರ್ಕಳ ಉಡುಪಿ ಮುಖ್ಯ ರಾಜ್ಯ ಹೆದ್ದಾರಿಯ ನೀರೆ ಯಿಂದ ಬೈಲೂರು ಬಸ್ರಿಶಾಲೆ ಜಾರ್ಕಳ, ಜ್ಞಾನಸುಧಾ ಕಾಲೇಜು , ಮುಗ್ಗೆರ್ಕಳ ರಸ್ತೆ , ಕುಕ್ಕುಂದೂರು ಗ್ರಾ.ಪಂ ವ್ಯಾಪ್ತಿಯ ಜೋಡುರಸ್ತೆ , ವರೆಗೆ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.