


ಬಜಗೋಳಿ: ಮುಂಬೈಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ "ರಿಬ್ಬನ್ಸ್ ಆಂಡ್ ಬಲೂನ್ಸ್" ನ ನೂತನ ಶಾಖೆಯು ಕಾರ್ಕಳ ದ ಬಜಗೋಳಿಯ ಶ್ರೀಸಾಯಿರಾಂ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಇಂದು ಉದ್ಘಾಟನೆ ಗೊಂಡಿತು.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಸ್ವಾಮಿಜಿ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಸಂಸ್ಥೆಯು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ಗಳಾಗಿ ಬಜಗೋಳಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಸೈಂಟ್ ಥೋಮಸ್ ಚರ್ಚ್ ನ ಧರ್ಮಗುರು ಮನೋಜ್, ಶ್ರಿ ಸಾಯಿಕೃಪ ಜ್ಯುವೆಲ್ಲರ್ಸ್ ನ ಪ್ರಸಾದ್ ಸಿ ಆಚಾರ್ಯ, ಅಗ್ನಿಲ ಪೆಟ್ರೋಲ್ ಬಂಕ್ ಮಹಾವೀರ್ ಜೈನ್, ನವದುರ್ಗ ಪುಡ್ ಪ್ರಾಡಕ್ಟ್ ನ ಗುಣಪಾಲ್ ಎನ್ ಶೆಟ್ಟಿ, ಶ್ರೀದೇವಿ ಮೆಡಿಕಲ್ ನ ಸದಾಶಿವ ಪೂಜಾರಿ, ಪೆರ್ಡೂರಿನ ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ನಾಯಕ್ , ಪೆರ್ಡೂರು ಬಂಟರ ಸಂಘ ಅಧ್ಯಕ್ಷ ಶಾಂತರಾಮ್ ಸೂಡ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಸಂಸ್ಥೆಯ ವಿಷೇಶತೆ:
ರುಚಿ ರುಚಿಯಾದ ಕೇಕ್, ಹುಟ್ಟು ಹಬ್ಬ – ಶುಭ ಸಮಾರಂಭಗಳ ಆಚರಣೆಗಾಗಿ ವೆರೈಟಿ ಡಿಸೈನ್ ಗಳಲ್ಲಿ ಕೇಕ್, ಹೀಗೆ ಕೇಕ್ ಪ್ರಿಯರಿಗೆ ರಿಬ್ಬನ್ಸ್ ಆಂಡ್ ಬಲೂನ್ಸ್ ಕೇಕ್ ಶಾಪ್ ನಲ್ಲಿ ಎಲ್ಲವು ಲಭ್ಯ. ಕಸ್ಟರ್ಡ್ Eclairs. ಹನಿ-ಆಕ್ರೋಡು ಕೇಕ್, Soufflé, ಚಾಕೊಲೇಟ್, ಠೀವಿಗಾರ್ ಕೇಕ್. ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು ಡೆಲಿವರಿ ಮಾಡುವ ಫ್ರೀ ಹೋಮ್ ಡೆಲಿವೆರಿ ಸೇವೆಗಳಿಗೆ ಕೂಡ ರಿಬ್ಬನ್ಸ್ ಆಂಡ್ ಬಲೂನ್ಸ್ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ವಿಭಿನ್ನ ಮಾದರಿಯ ತಾಜಾ ಕೇಕ್ ಗಳು ಮಾತ್ರವಲ್ಲ ಬಗೆಬಗೆಯ ಸಿಹಿ ಖಾಧ್ಯಗಳು ಕೂಡ ಲಭ್ಯ.

ಬರ್ತ್ಡೆ ಸೆಲೆಬರೇಷನ್ ಗೆ ಬೇಕಾದ ಶೃಂಗಾರಗೊಂಡ ಕೊಠಡಿಯ ವ್ಯವಸ್ಥೆಯು ಇಲ್ಲಿದೆ. ಬಜಗೋಳಿಯ ಜನತೆಗೆ ಬೇಕಾದ ವಿಭಿನ್ನ ಮಾದರಿಯ ಫ್ರೆಶ್ ಕೇಕ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಒದಗಿಸಬೇಕು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎನ್ನುವುದು ಸಂಸ್ಥೆಯ ಆಶಯ ವಾಗಿದೆ ಎನ್ನುತ್ತಾರೆ ಸಂಘಟಕರು.


ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.