



ಬೆಳ್ಮಣ್, : ದೇವಸ್ಥಾನ ಪ್ರತಿಯೊಂದು ಊರಿನ ಶ್ರದ್ಧಾ ಕೇಂದ್ರಗಳಾಗಿದ್ದು ಹಿಂದೆ ಧಾರ್ಮಿಕ , ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಚಿಂತನೆಗಳು ಚಟುವಟಿಕೆಗಳು ಈ ದೇಗುಲಗಳ ಮೂಲಕ ನಡೆಯುತ್ತಿತ್ತು. ಈ ಹಿಂದೆ ಸಾಮಾಜಿಕ ಆಧಾರಿತವಾಗಿದ್ದ ದೇವಳಗಳು ಇದೀಗ ಸರಕಾರಿ ಆಧಾರಿತವಾಗಿದ್ದು ಮತ್ತೆ ಅದನ್ನು ಊರಿನ ಜನರ, ಭಕ್ತರ ಶ್ರದ್ಧಾ ಕೇಂದ್ರಗಳನ್ನಾಗಿಸಬೇಕಾಗಿದೆ ಎಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರ ಮುಂಡ್ಕೂರು ಕಜೆ ಶ್ರೀ ಮಹಮ್ಮಾಯೀ ದೇಗುಲದಲ್ಲಿ ನಿರ್ಮಾಣಗೊಂಡ ನೂತನ ಸಭಾಭವನವನ್ನು ಲೋಕಾರ್ಪಣೆಗೈದು ಮಾತನಾಡಿದರು. ಸಮಾಜದಲ್ಲಿ ಧಾರ್ಮಿಕ ಭಾವನೆಗಳು ಜಾಗೃತಿಗೊಳ್ಳಬೇಕಾಗಿದ್ದು ಈ ಕೆಲಸ ಆಯಾ ಊರಿನ ದೇಗುಲಗಳಿಂದ ನಡೆಯಬೇಕಾಗಿದೆ ಎಂದ ಅವರು ದೇವಳಗಳು ಸಮಾಜದ ಪರಿವರ್ತನೆಯ ಕೇಂದ್ರಗಳಾಗಬೇಕಾಗಿದೆ ಎಂದರು. ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ತ ಶಿರೀ ಪಾದಂಗಳವರು ಆಶೀರ್ವಚನಗೈದು ಮಾತನಾಡಿ, ಮನುಷ್ಯ ಹುಟ್ಟುವಾಗ ಯಾವುದೇ ಸಂಪತ್ತನ್ನು ತರುವುದಿಲ್ಲ ಬದಲಾಗಿ ಜೀವನದಲ್ಲಿ ನಡೆಸಿದ ಪುಣ್ಯ ಕಾರ್ಯಗಳ ಮೂಲಕ ಸಂಪತ್ತು ಗಳಿಸುತ್ತಾನೆ, ಅದನ್ನು ಸದ್ವಿನಿಯೋಗ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು. ಕಜೆ ಕ್ಷೇತ್ರದ ಗೌರವಾಧ್ಯಕ್ಷ ಎಂ.ಜಿ.ಕರ್ಕೇರಾ ಆಧ್ಯಕ್ಷತೆ ವಹಿಸಿದ್ದು, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ನಾರಾಯಣಿ ವೆಂಕಟೇಶ ಪ್ರಭು ವೇದಿಕೆಯ ದಾನಿಗಳಾದ ಮುಂಬÉೈನ ಉದ್ಯಮಿ ಏಕನಾಥ ಪ್ರಭು ಹಾಗೂ ಮುಂಬÉೈ ಹೈಕೋರ್ಟ್‍ನ ವಕೀಲೆ ಅಕ್ಷತಾ ಪ್ರಭು, ಕ್ಷೇತ್ರದ ಪ್ರಧಾನ ಅರ್ಚಕ ಅನಂತಕೃಷ್ಣ ಆಚಾರ್ಯ, ಮುಂಬÉೈನ ಉದ್ಯಮಿ ಮುಂಡ್ಕೂರು ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಪಾಂಡಿಚೇರಿಯ ಉದ್ಯಮಿ ಸುಧಾಕರ ಶೆಟ್ಟಿ, ಮುಂಬÉೈನ ಉದ್ಯಮಿ ತಡ್ಯಾರು ಸದಾಶಿವ ಶೆಟ್ಟಿ, ಮಂಗಳೂರಿನ ಲೆಕ್ಕಪರಿಶೋಧಕ ಜಗನ್ನಾಥ ಕಾಮತ್, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಮುಂಡ್ಕೂರು ವಿಠೋಭ ದೇವಳದ ಆಡಳಿತ ಮೊಕ್ತೇಸರ ವೆಂಕಟೇಶ ಕಾಮತ್, ಚನೈನ ಪುರೋಹಿತ ರಾಘವೇಂದ್ರ ಆಚಾರ್ಯ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅರ್ಚಕ ರಾಮದಾಸ ಆಚಾರ್ಯ, ಕ್ಷೇತ್ರದ ದರ್ಶನ ಪಾತ್ರಿ ಸತೀಶ್ ಪೂಜಾರಿ, ಮುಂಡ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಹಾಗೂ ಕ್ಷೇತ್ರದ ಆಡಳಿತದಾರರಾದ ಕಜೆ ಆರು ಮನೆಯ ಪ್ರತಿನಿ„ಗಳಿದ್ದರು. ನಾರಾಯಣಿ ವೆಂಕಟೇಶ ಪ್ರಭು ವೇದಿಕೆಯ ದಾನಿಗಳಾದ ಮುಂಬÉೈನ ಉದ್ಯಮಿ ಏಕನಾಥ ಪ್ರಭು ಹಾಗೂ ಮುಂಬÉೈ ಹೈಕೋರ್ಟ್‍ನ ವಕೀಲೆ ಅಕ್ಷತಾ ಪ್ರಭು, ಅತಿಥಿ ಗೃಹದ ಪ್ರಾಯೋಜಕರಾದ ಕಜೆ ಆಚೆಮನೆ ಸುನಂದಾ ಮಹಾಬಲ ಕರ್ಕೇರಾರ ಸ್ಮರಣಾರ್ಥ ಡಾ.ವಿನಿತಾ ಹಾಗೂ ಡಾ.ಆಶುತೋಶ್ ಬೋಳೂರುರವರನ್ನು, ಪಾಕಶಾಲೆಯ ಪ್ರಾಯೋಜಕರಾದ ಮುಂಡ್ಕೂರು ಜಯರಾಮ ಆಚಾರ್ಯರ ಸ್ಮರಣಾರ್ಥ ಜ್ಯೋತಿ ಹಾಗೂ ಅನಂತಕೃಷ್ಣ ಆಚಾರ್ಯ ಮತ್ತು ಸಹೋದರರನ್ನು, ಮಿನಿ ಸಭಾಗೃಹದ ಪ್ರಾಯೋಜಕರಾದ ಅಂಗಡಿಗುತ್ತು ಶಾಂತಾ ಮಂಜುನಾಥ ಶೆಟ್ಟಿ ಸ್ಮರಣಾರ್ಥ ಅವರ ಪುತ್ರ ಅಂಗಡಿಗುತ್ತು ಪ್ರಸಾದ್ ಎಂ. ಶೆಟ್ಟಿ ಹಾಗೂ ರಾಜೇಶ್ವರೀ ಪಿ.ಶೆಟ್ಟಿಯವರನ್ನು, ಉಗ್ರಾಣದ ಪ್ರಾಯೋಜಕರಾದ ಮುಲ್ಲಡ್ಕ ಗುರುಪ್ರಸಾದ್ ರಾಘು ಟಿ.ಶೆಟ್ಟರ ಸ್ಮರಣಾರ್ಥ ಅವರ ಸೋದರಳಿಯ ಸುಧಾಕರ ಶೆಟ್ಟಿ ಹಾಗೂ ಸುಜಾತಾ ಸುಧಾಕರ ಶೆಟ್ಟಿಯವರನ್ನು, ವೇದಿಕೆಯ ಬಲಭಾಗದ ವಿಶ್ರಾಂತಿ ಕೊಠಡಿಯ ದಾನಿ ಜಯಶ್ರೀ ರಾಮದಾಸ್ ಹಾಗೂ ರಾಮದಾಸ ಪಿ.ಮಡ್ಮಣ್ಣಾಯರ ಪರವಾಗಿ ಸಹೋದರ ವಾದಿರಾಜ ಮಡ್ಮಣ್ಣಾಯರವರ್ನು , ವೇದಿಕೆಯ ಎಡಭಾಗದ ಕೊಠಡಿಯ ದಾನಿ ನೇತ್ರಾವತಿ ನಾರಾಯಣ ಸಪಳಿಗರ ಸ್ಮರಣಾರ್ಥ ಕಜೆ ಮಂಗ್ಲಿಮಾರು ಮನೆ ನಾರಾಯಣ ಕುಪ್ಪ ಸಪಳಿಗರನ್ನು, ಸಭಾಭವನದ ವಿದ್ಯುತ್ ದೀಪ ಹಾಗೂ ವಿವಿಧ ಸಲಕರಣೆಗಳ ಪ್ರಾಯೋಜಕರಾದ ಕಜೆ ಪಡುಬÉೈಲು ಮನೆ ನರ್ಸಿ ಸಿದ್ಧು ಕಾಂಚನ್ ಸ್ಮರಣಾರ್ಥ ಮೊಮ್ಮಗ ಪುಣೆಯ ವಿಜಯ ಮೋನಪ್ಪ ಮಿಜಾರ್‍ರವರನ್ನು, ಸಭಾಭವನದ ಮೇಲ್ಚಾವಣಿಯ ದಾನಿ ಮುಂಡ್ಕೂರು ತಡ್ಯಾರು ಮನೆ ಸದಾಶಿವ ಶೆಟ್ಟಿ, ಮಿನಿ ಸಭಭಾವನದ ಮೇಲ್ಚಾವಣಿಯ ದಾನಿ ಬೋಳ ವೆಂಕಟೇಶ ಕಾಮತ್ ಸ್ಮರಣಾರ್ಥ ಸಚ್ಚೇರಿಪೇಟೆ ಬಿ.ವಿ.ಕೆ ರೈಸ್ ಮಿಲ್‍ನ ಶ್ರೀಕಾಂತ ಕಾಮತ್ ಹಾಗೂ ಸಭಾಭವÀವನದ ನೀರು ಸರರಾಜು ವ್ಯವಸ್ಥೆಯ ದಾನಿ ಸಚ್ಚೇರಿಪೇಟೆ ಅಕ್ಕು ಶೇರಿಗಾರ್ ಸ್ಮರಣಾರ್ಥ ಪುತ್ರಿ ದೀಪಿಕಾ ಶೇರಿಗಾರ್‍ರವರನ್ನು, ಸಿಂಕ್‍ನ ದಾನಿ ಜಗನ್ನಾಥ್ ಕಾಮತ್‍ರವರನ್ನು ಸಮ್ಮಾನಿಸಲಾಯಿತು. ವಿವಿಧ ಕಾಮಗಾರಿಗಳ ಗುತ್ತಿಗೆದಾರರಾದ ಭಾಸ್ಕರ ಶೆಟ್ಟಿ, ಉಮೇಶ್ ಕಾಮತ್ ಹಾಗೂ ಸತೀಶ್ ಪ್ರಭುರವರನ್ನು , ಆರ್ಥಿಕ ನೆರವು ನೀಡಿದ ಇತರ ದಾನಿಗಳನ್ನು ಗೌರವಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.