



ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಆಚರಣೆಯನ್ನು ಸೇವೆ ಮತ್ತು ಸಮರ್ಪಣೆಯ ಅಂಗವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದ ಭಾಗವಾಗಿ ಭಾರತೀ ಸೇವಾ ಮಂಡಳಿ ಟ್ರಸ್ಟ್ ವತಿಯಿಂದ ನಡೆಸುವ ಚೇತನಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳೊಂದಿಗೆ ತಮ್ಮ ಸಮಯವನ್ನು ಕಳೆಯುವುದರ ಜೊತೆ ಪಕ್ಷದ ವತಿಯಿಂದ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಇದುವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಫಿಸಿಯೋಥೆರಪಿ ಚಿಕಿತ್ಸಾ ಸೇವೆಯನ್ನು ಸಾರ್ವಜನಿಕರಿಗೆ ವಿಸ್ತರಿಸುವ ಮೂಲಕ ಘಟಕವನ್ನು ಮಾನ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಉದ್ಘಾಟಿಸಿದರು. ವಿಶೇಷ ಮಕ್ಕಳ ಸೇವೆಗೆ ಅವಶ್ಯಕ ಮೂಭೂತ ಸೌಕರ್ಯ ಅಚ್ಚುಕಟ್ಟಾಗಿ ಕಲ್ಪಿಸಿರುವ ಸಂಸ್ಥೆಯ ಸೇವೆಯು ಇನ್ನಷ್ಟು ಅವಶ್ಯಕ ಜನರಿಗೆ ಸಿಗಲಿ ಹಾಗೂ ಸೇವೆಯ ಮುಂದುವರೆದ ಅಂಗವಾಗಿ ಇದೀಗ ಸಾರ್ವಜನಿಕರಿಗೆ ಫಿಸಿಯೋಥೆರಪಿ ಚಿಕಿತ್ಸೆ ವಿಸ್ತರಿಸಿರುವುದಕ್ಕೆ ಸಂಸ್ಥೆಗೆ ಶುಭ ಹಾರೈಸುವುದರ ಜೊತೆಗೆ ಅಭಿನಂದಿಸಿದರು ಹಾಗೂ ಸಂಸ್ಥೆಗೆ ಈ ಹಿಂದೆಯೂ ಸಹಕಾರ ನೀಡಿದ್ದು ಮುಂದೆಯೂ ಅದನ್ನು ಮುಂದುವರೆಸುವ ಭರವಸೆಯನ್ನು ಅವರು ನೀಡಿದರು. ವೇದಿಕೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಕುಲ್ಯಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಕಾರ್ಕಳ ತಾಲೂಕು ಅಧ್ಯಕ್ಷರಾದ ಮಹಾವೀರ್ ಹೆಗ್ಡೆ, ಟ್ರಸ್ಟಿನ ಗೌರವಾಧ್ಯಕ್ಷರಾದ ಬಿ. ಗಣಪತಿ ಹೆಗ್ಡೆ, ಅಧ್ಯಕ್ಷರಾದ ಎಂ. ಗಣಪತಿ ಪೈ, ಸಂಚಾಲಕರಾದ ರಘುನಾಥ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಣಿರಾಜ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಬಿಜೆಪಿ ಕಾರ್ಕಳ ತಾಲೂಕು ಕಾರ್ಯದರ್ಶಿ ಜಯರಾಮ್ ಸಾಲ್ಯಾನ್ ಹಾಗೂ ಬಿಜೆಪಿ ಮಹಿಳಾ ಮೋರ್ಚದ ಪದಾಧಿಕಾರಿಗಳು ಹಾಜರಿದ್ದರು.
ಶಾಲಾ ಸಂಚಾಲಕರಾದ ರಘುನಾಥ ಶೆಟ್ಟಿ ಇವರು ಸ್ವಾಗತಿಸಿದರು ಹಾಗೂ ಕೇಂದ್ರ ಸಚಿವರು ಈ ಹಿಂದೆ ನೀಡಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು, ಶಿಕ್ಷಕಿ ಮಂಜುಳಾ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಧನ್ಯವಾದಗೈದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.