



ನಿಟ್ಟೆ : ಡಾ| ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ 30ನೇ ವಾರ್ಷಿಕ ವಿಶೇಷ ಶಿಬಿರವು ಅಮ್ರತ ಸಮುದಾಯ ಅಭಿವೃದ್ಧಿ ಯೋಜನೆಯ ಅಂಗವಾಗಿ ಮನೆ- ಮನೆ ಸಮಿಕ್ಷೆ ಕಾರ್ಯಕ್ರಮ ನಂದಳಿಕೆ ಗ್ರಾಮ ಪಂಚಾಯತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದು, ಈ ಶಿಬಿರವನ್ನು ನಂದಳಿಕೆ ಚಾವಡಿ ಅರಮನೆಯ ಶ್ರೀಯುತ ಸುಹಾಸ್ ಹೆಗ್ಡೆ ಉದ್ಘಾಟಿಸಿ ಶಿಬಿರದ ಅನುಭವ ಹಾಗೂ ಶಿಕ್ಷಣವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಂದಳಿಕೆ ಗ್ರಾಮದ ಪ್ರಥಮ ಪ್ರಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಅಮಿನ್ ಶಿಬಿರದ ರೂಪುರೇಷೆಗಳನ್ನು ಪ್ರಸ್ತುತ ಪಡಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಇನ್ನೊರ್ವ ಮುಖ್ಯ ಅತಿಥಿ ರೋಟರಿ ಕ್ಲಬ್ ಬೆಳ್ಮಣ್ಣೀನ ಸ್ಥಾಪಕ ಅಧ್ಯಕ್ಷ ಹಾಗೂ ವಲಯ 5ರ ಪೂರ್ವ ಸಾಹಯಕ ಗವರ್ನರ್ ಸೂರ್ಯಕಾಂತ ಶೆಟ್ಟಿ ನಿಟ್ಟೆ ವಿದ್ಯಾಸಂಸ್ಥೆ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ವಿಶೇಷತೆಯೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿ ರುತ್ತದೆ ಎಂದು ಶ್ಲಾಘಿಸಿದರು. ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಳಿಕೆ ಇದರ ಮುಖ್ಯ ಶಿಕ್ಷಕ ಶ್ರೀ ಕರುಣಾಕರ್ ನಾಯ್ಕ್ ಶಿಬಿರಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ವೀಣಾ ಕುಮಾರಿ ಬಿ ಕೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಈ ರೀತಿಯ ಸಮಿಕ್ಷೆ ಕಾರ್ಯಗಳು ಕೇವಲ 7ದಿನಗಳಿಗೆ ಸೀಮಿತವಾಗದೆ ನಿರಂತರವಾಗಿರಬೇಕು ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಸಮಾಜಕ್ಕೆ ಆಸ್ತಿಗಳಾಗಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತುಗಳನ್ನಾಡಿದರು. ಈ ಶುಭ ಸಮಾರಂಭದ ಉದ್ಘಾಟನೆಯ ವೇದಿಕೆಯಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಘ್ನೇಶ್ ಶೆಣೈ, ವಿಜಯ ಬ್ಯಾಂಕಿನ ನಿವ್ರೃತ್ತ ಉದ್ಯೋಗಿ ಸತ್ಯಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ವೀಣಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರೇವತಿ ಉಪಸ್ಥಿತರಿದ್ದರು. ಈ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿಗಳಾದ ಶ್ರೀ ಭರತ್ ಎಸ್ ಭಟ್ಟ್ ಸ್ವಾಗತಿಸಿ, ಕುಮಾರಿ ಅನುಷಾ ಆಚಾರ್ಯ ವಂದಿಸಿದರು. ಸಂಸ್ಥೆಯ ಸಾಹಯಕ ಪ್ರಾಧ್ಯಾಪಕ ಸಚ್ಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ 7ದಿನಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ 140 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.