



ನವದೆಹಲಿ: ರಾಜಧಾನಿಯಲ್ಲಿ ಕರೋನ ಏರಿಕೆ ಕಾಣುತಿದ್ದು ಇದರ ಬಗ್ಗೆ ಮಾಹಿತಿ ನೀಡಿದ ಸಿಎಂ ಕೇಜ್ರಿವಾಲ್, ಕೆಲವು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.0.5ಕ್ಕಿಂತ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಈ ವೇಳೆ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ತೆರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ದೆಹಲಿಯಲ್ಲಿ ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ಅನುಮತಿ? ಸಿನಿಮಾ ಹಾಲ್, ಬ್ಯಾಂಕ್ವೆಟ್ ಹಾಲ್ ಗಳು, ಸ್ಪಾ, ಜಿಮ್ಸ್, ಔಟ್ ಡೋರ್ ಯೋಗ ಚಟುವಟಿಕೆ, ಈಜುಕೊಳ, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬಂದ್. ಖಾಸಗಿ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲು ಅವಕಾಶ ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿಗಳನ್ನು ದಿನ ಬಿಟ್ಟು, ದಿನ ತೆರೆಯಲು ಅವಕಾಶ. ಬೆಳಗ್ಗೆ 10ರಿಂದ ರಾತ್ರಿ 8ಗಂಟೆವರೆಗೆ ವ್ಯವಹಾರ ನಡೆಸಲು ಮಾತ್ರ ಅನುಮತಿ. ವಾರದ ಸಂತೆಯಲ್ಲಿ ಶೇ.50ರಷ್ಟು ಮಾರಾಟಗಾರರಿಗೆ ಅವಕಾಶ. ರೆಸ್ಟೋರೆಂಟ್ ಗಳು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆಯೊಂದಿಗೆ ತೆರೆಯಲು ಅನುಮತಿ ಬಾರ್ ಗಳು ಕೂಡಾ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.