logo
WhatsApp Image 2026-04-02 at 14.46.04.jpeg
hindalco everlast.jpeg

ಎಂಜಿಎಂ ಕಾಲೇಜಿಗೆ ಅನಿರ್ದಿಷ್ಟಾವದಿ ರಜೆ. ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ.. ಹಿಜಾಬ್ ವಿಚಾರದಲ್ಲಿ ಕೋರ್ಟ್ ಏನು ಹೇಳಿದೆ ಇಲ್ಲಿ ನೋಡಿ !

ಟ್ರೆಂಡಿಂಗ್
share whatsappshare facebookshare telegram
8 Feb 2022
post image

ಉಡುಪಿ:
ಎಂಜಿ ಎಂ ಕಾಲೇಜಿಗೆ ಅನಿರ್ದಿಷ್ಟ ವದಿ ರಜೆ ಉಡುಪಿ: ಹಿಜಾಬ್ ಕೇಸರಿ ನಡುವಿನ ಗಲಾಟೆ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಅನಿರ್ಧಿಷ್ಟಾವಧಿವರೆಗೆ ಕಾಲೇಜಿಗೆ ರಜೆ ಕೊಟ್ಟಿದ್ದೇವೆ. ಕೋರ್ಟ್ ಆದೇಶ ಏನು ಬರುತ್ತದೆ ಎಂಬುವುದನ್ನು ಕಾದುನೋಡುತ್ತೇವೆ. ಮುಂದಿನ ತೀರ್ಮಾನ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪಿಯುಸಿ ಹಾಗೂ ಪದವಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದೇವೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಡಾ. ದೇವಿದಾಸ್ ಎಸ್. ನಾಯ್ಕ್ ತಿಳಿಸಿದ್ದಾರೆ ದ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಬದಲಿಗೆ ಕೇಸರಿ ಧ್ವಜ: ಕೇಸರಿ ಹಿಜಾಬ್ ವಿವಾದಗಳ ನಡುವೆ ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಧ್ವಜಸ್ತಂಭದಲ್ಲಿಕೇಸರಿ ಬಾವುಟ ಹಾರಿಸಿದ ವ ಘಟನೆ ನಡೆದಿದೆ.. ಎಸ್.ಪಿ.ಲಕ್ಷ್ಮೀಪ್ರಸಾದ್ ಹಾಗು ಪೋಲೀಸರು ಕಾರ್ಯಪ್ರವೃತ್ತರಾಗಿ ಲಾಠಿ ಬೀಸಿದ್ದು, ಗುಂಪುಗಳನ್ನು ಚದುರಿಸಿದ್ದಾರೆ. ನಗರದಲ್ಲಿ

ಲಾಂಗ್ ಮಚ್ಚುಗಳ ವಶ :ಶಿವಮೊಗ್ಗದಲ್ಲಿ ಬುಗಿಲೆದ್ದಿರುವ ಹಿಜಬ್ ಮತ್ತು ಕೇಸರಿ ಶಾಲಿನ ವಿಚಾರದಲ್ಲಿ ಇಂದು ಮತ್ತು ನಾಳೆನೂ ಸೆಕ್ಷನ್ 144 ಜಾರಿಯಾಗಿದ್ದು ಲಷ್ಕರ್ ಮೊಹಲ್ಲಾದಲ್ಲಿ ಅನ್ಯಕೋಮಿನ ಯುವಕರ ರಸ್ತೆಗಿಳಿದು ದಿಡೀರನೇ ಪ್ರತಿಭಟನೆ ನಡೆಸಿದ್ದು ಲಾಂಗು ಮಚ್ಚು ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋರ್ಟ್ ಏನು ಹೇಳಿದೆ:

ಸಂವಿಧಾನದ ವೆ ಭಗವದ್ಗೀತೆ ಅದರಂತೆಯೇ ವಿಚಾರಣೆ ನಡೆಸೋಣ ಎಂದ ಹೈಕೋರ್ಟ್ .

ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತ್ತಿದ್ದು, ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ವಿವಾದ ಸಂಬಂಧ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಭಗದ್ಗೀತೆಗಿಂತ ಸಂವಿಧಾನವೇ ಮೇಲು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.