



ದೆಹಲಿ :ಪ್ರತಿ ಕಿಲೋಗ್ರಾಮ್‌ಗೆ 50 ರೂ. ಗಿಂತ ಕಡಿಮೆ ಬೆಲೆಯ ಅಥವಾ ಸಮಾನವಾದ ಬೆಲೆಯ ಸೇಬುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ.
“ಭೂತಾನ್‌ನಿಂದ ಆಮದು ಮಾಡಿಕೊಳ್ಳಲು ಕನಿಷ್ಠ ಆಮದು ಬೆಲೆ (ಎಂಐಪಿ) ಷರತ್ತುಗಳು ಅನ್ವಯವಾಗುವುದಿಲ್ಲ” ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. ಪ್ರತಿ ಕಿಲೋಗ್ರಾಂಗೆ 50 ರೂ.ಗಿಂತ ಹೆಚ್ಚು ಬೆಲೆಯ ಸೇಬುಗಳಿಗೆ ಆಮದು ನೀತಿಯು (import policy) “ಉಚಿತ” ಎಂದು ತಿಳಿಸಿದೆ.
ಭಾರತಕ್ಕೆ ಸೇಬುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳೆಂದರೆ ಯು ಎಸ್, ಇರಾನ್, ಬ್ರೆಜಿಲ್, ಯುಎಇ, ಅಫ್ಘಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಇಟಲಿ, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.