logo
WhatsApp Image 2026-04-02 at 14.46.04.jpeg
hindalco everlast.jpeg

ಹಮಾಸ್‌ ಉಗ್ರದಾಳಿಗೆ ಭಾರತ- ಯುರೋಪ್‌ ಎಕನಾಮಿಕ್‌ ಕಾರಿಡಾರ್‌ ಕಾರಣ: ಬೈಡನ್‌

ಟ್ರೆಂಡಿಂಗ್
share whatsappshare facebookshare telegram
26 Oct 2023
post image

ವಾಷಿಂಗ್ಟನ್‌: ಹಮಾಸ್‌ ಉಗ್ರ ಸಂಘಟನೆ ಇತ್ತೀಚೆಗೆ ಇಸ್ರೇಲ್‌ ಮೇಲೆ ನಡೆಸಿದ ದಾಳಿಗೆ ಭಾರತದಲ್ಲಿ ನಡೆದ ಜಿ. 20 ಶೃಂಗಸಭೆಯಲ್ಲಿ ಘೋಷಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಎಕನಾಮಿಕ್ ಕಾರಿಡಾರ್ (IMEEC) ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಮಾಸ್ ದಾಳಿಗೆ ಇದು ಒಂದು ಕಾರಣವಾಗಿರಬಹುದು. ಇಸ್ರೇಲ್‌ ನ ಪ್ರಾದೇಶಿಕ ಏಕೀಕರಣವನ್ನು ಒಪ್ಪದ ಕಾರಣ ಇಂತಹ ದಾಳಿ ನಡೆದಿರಬಹುದು ಎಂದು ಬಿಡೆನ್‌ ಹೇಳಿದ್ದಾರೆ. ಆದರೆ ನಾವು ಕಾರಿಡಾರ್‌ ಅನ್ನು ನಿಲ್ಲಿಸುವಂತಿಲ್ಲ ಎಂದು ಹೇಳಿದ್ದಾರೆ. ಕಳೆದ ವಾರವೂ ಬೈಡನ್‌ ಹಮಾಸ್‌ ದಾಳಿಗೆ ಆರ್ಥಿಕ ಕಾರಿಡಾರ್‌ ಕಾರಣ ಎಂದು ಹೇಳಿಕೆ ನೀಡಿದ್ದರು. ಚೀನಾದ ಒನ್‌ ಬೆಲ್ಟ್‌ ಒನ್‌ ರೋಡ್‌ ಗೆ ಬದಲಾಗಿ ಪರ್ಯಾಯ ಎಂದು ನಂಬಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಎಕನಾಮಿಕ್ ಅನ್ನು ಘೋಷಿಸಲಾಗಿತ್ತು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.