



ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಭಾರತವು ಆಯ್ಕೆಯಾಗಿದೆ. 2024ರ ಜನವರಿ 1ರಿಂದ ಅಧಿಕಾರವಧಿ ಪ್ರಾರಂಭವಾಗಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟ್ವಿಟ್ಟರ್‌ನಲ್ಲಿ ಈ ವಿಷಯ ತಿಳಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಖ್ಯಾ ಆಯೋಗದ ಚುನಾವಣೆಯಲ್ಲಿ ಭಾರತವು 53ಕ್ಕೆ 46 ಮತಗಳನ್ನು ಗಳಿಸಿತು. ಪ್ರತಿಸ್ಪರ್ಧಿಗಳಾದ ರಿಪಬ್ಲಿಕ್ ಆಫ್ ಕೊರಿಯಾ (23) ಚೀನಾ (19) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (15) ಪಡೆದಿವೆ.
ಅಂಕಿಅಂಶ, ವೈವಿಧ್ಯತೆ ಮತ್ತು ಜನಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿನ ಭಾರತದ ಪರಿಣತಿಯು ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಸ್ಥಾನ ಗಳಿಸಲು ನೆರವಾಗಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.