



ಕಾರ್ಕಳ: ವಿವಿಧ ಜಲ್ಲೆಗಳ ಉತ್ಪನ್ನಗಳ ಪ್ರದರ್ಶನ ಮಾರಾಟದಿಂದ ಸಬಲೀಕರಣದ ಸಫಲತೆ ಫಲ ಕಂಡು ಬರುತ್ತಿದೆ . ವಿವಿಧ ರಾಜ್ಯಗಳ ವಸ್ತುಗಳ ಮೂಲಕ ಭಾರತ ದರ್ಶನ ವಾಗುತ್ತದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಭಾರತ ಸರಕಾರ-ಗಾಂಧೀ ಶಿಲ್ಕ್ ಬಜಾರ್, ಕನರ್ಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಬೆಂಗಳೂರು ಕನರ್ಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ರಾಷ್ಟ್ರಮಟ್ಟದ ಕರಕುಶಲ ವಸ್ತುಪ್ರದರ್ಶನ ಮತ್ತು ರಾಜ್ಯದ ಮಟ್ಟದ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.. ಮೀನುಗಾರಿಕೆ ಮತ್ತು ಒಳನಾಡು ಸಆರಿಗೆ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ವಸ್ತುಪ್ರದರ್ಶನ ಉದ್ಘಾಟಿಸಿ ಶುಭಹಾರೈಸಿದರು. ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ರೂಪಾ ಡಿ. ಮದ್ಗಿಲ್ ಅವರು ರಾಷ್ಟ್ರ ಮಟ್ಟದ ಕರಕುಶಲ ಮೇಳ ಇಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಸರಕಾರ ಮತ್ತು ಸಚಿವರಿಂದ ನೆರವಿನಿಂದ ಈ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೀ ಅಕ್ಷಯ್ ಮಚ್ಚೀಂದ್ರ, ಐಎಎಸ್ ಅಧಿಕಾರಿ ಯತೀಶ್, ಕುಂದಾಪುರ ಉಪವಿಭಗದ ಸಹಾಯಕ ಆಯುಕ್ತ ವಿ. ರಾಜು, ಹಿರಿಯ ನ್ಯಾಯವಾಧಿ ಎಂ.ಕೆ ವಿಜಯಕುಮಾರ್, ಕರಕುಶಲ ಹ್ಯಾಂಡಿಕ್ರಾಪ್ಟ್ ಅಸಿಸ್ಟೆಂಟ್ ಡೈರೆಕ್ಟರ್ ಮೈಕಲ್, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ, ರೇವತಿ, ಜಿ.ಪಂ ಸಿಇಒ ಪ್ರಸನ್ನ ಪ್ರಸ್ತಾವನೆಗೈದರು. ಪ್ರಮೀಳಾ ನಾಗೇಶ್ ಸ್ವಾಗತಿಸಿ, ಅಂಕಿತಾ ವಂದಿಸಿ, ಗಣೇಶ್ ಜಾಲ್ಸೂರು ನಿರೂಪಿಸಿದರು. ಕಾರ್ಕಳ ಪತ್ರಕರ್ತ ಬಾಲಕೃಷ್ಣ ಭೀಮಗುಳಿಯ ಕಾರ್ಕಳ ಪ್ರವಾಸೋದ್ಯಮ ಕುರಿತ ಕಿರು ಹೊತ್ತಿಗೆ ಬಿಡುಗಡೆಗೊಂಡಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.