



ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಪಕ್ಷಿಧಾಮದ ಜೌಗು ಪ್ರದೇಶದಲ್ಲಿ ಭಾರತೀಯ ನೀರುನಾಯಿಯೊಂದು ಕಾಣಿಸಿಕೊಂಡಿರುವುದು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಈ ಹಿಂದೆ ಈ ಅಭಯಾರಣ್ಯವು ಈಗ್ರೆಟ್ಸ್ (ಬೆಳ್ಳಕ್ಕಿ), ಕ್ರೆಸ್ಟೆಡ್ ಲಾರ್ಕ್ಸ್, ಲಿಟಲ್ ಕಾರ್ಮೊರೆಂಟ್ಸ್ (ನೀರುಕಾಗೆ), ಸ್ಪಾಟ್-ಬಿಲ್ಡ್ ಡಕ್ (ವರಟೆ ಅಥವಾ ಬಾತುಕೋಳಿ), ಕಾಮನ್ ಕೂಟ್, ಬಾಚಣಿಗೆ ಬಾತುಕೋಳಿ ಮತ್ತು ಯುರೇಷಿಯನ್ ಟೀಲ್ ಮುಂತಾದ ವಿವಿಧ ಜಾತಿಯ ಪಕ್ಷಿಗಳ ಆಗಮನಕ್ಕೆ ಸಾಕ್ಷಿಯಾಗಿತ್ತು. ಸ್ಥಳೀಯವಾಗಿ ‘ನೀರು ನಾಯಿ’ ಎಂದು ಕರೆಯುವ ಇಂಡಿಯನ್ ಒಟ್ಟರ್ ಪ್ರಾಣಿಗಳು ಇತ್ತೀಚಿನ ತಿಂಗಳುಗಳಲ್ಲಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿವೆ.
ನೀರುನಾಯಿಗಳು ಪಕ್ಷಿಗಳಿಗೆ ಅಪಾಯವನ್ನುಂಟುಮಾಡುತ್ತವೆಯೇ ಎಂಬ ಶಂಕೆ ಇದ್ದು, ನೀರುನಾಯಿಗಳು ಮೀನುಗಳನ್ನು ಮಾತ್ರ ತಿನ್ನುತ್ತವೆ ಮತ್ತು ಪಕ್ಷಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನಿವಾಸಿಗಳು ಭರವಸೆ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.