



ಚೆನ್ನೈ: ಭಾರತದ 18 ವರ್ಷದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದನ್ ಅವರು ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈಗ ಅವರು ಪ್ರಶಸ್ತಿಗಾಗಿ ವಿಶ್ವದ ನಂ.1 ಮತ್ತು ಮಾಜಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ನ್ ಜತೆ ಸೆಣಸಾಡಲಿದ್ದಾರೆ.
ಟೈ-ಬ್ರೇಕ್‌ಗಳ ನಂತರ ಭಾರತದ ಈ ಪ್ರತಿಭೆ ಫ್ಯಾಬಿಯಾನೊ ಕರುವಾನಾ ಅವರನ್ನು 3.5 – 2.5 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಮೊದಲ ಎರಡು ಟೈ-ಬ್ರೇಕ್ ಪಂದ್ಯಗಳನ್ನು ಡ್ರಾ ಮಾಡಿಕೊಂಡ ನಂತರ, ಪ್ರಗ್ನಾನಂದನ್, ಕರುವಾನಾ ಅವರನ್ನು ರೇಟಿಂಗ್ ಮೂಲಕ ಪರಾಭವಗೊಳಿಸಿದರು.
ಭಾನುವಾರ ನಡೆದ ಆರ್.ಪ್ರಜ್ಞಾನಂದನ್ ಮತ್ತು ವಿಶ್ವದ 3ನೇ ಶ್ರೇಯಾಂಕದ ಕರುವಾನಾ ನಡುವಿನ ಪಂದ್ಯವು 47 ನಡೆಗಳಲ್ಲಿ ಕೊನೆಗೊಂಡಿತ್ತು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದ ಕಾರ್ಲ್ಸನ್, ನಂತರ ಅಜೆರ್ಬೈಜಾನ್ ಆಟಗಾರ ನಿಜಾತ್ ಅಬಾಸೊವ್ ವಿರುದ್ಧ 74 ನಡೆಗಳಲ್ಲಿ ಡ್ರಾ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ನಾರ್ವೆಯ ಸೂಪರ್ ಸ್ಟಾರ್ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ್ದು ಇದೇ ಮೊದಲು.
ಈ ಪಂದ್ಯ ಗೆಲ್ಲುವ ಮೂಲಕ ಚೆನ್ನೈನ ಮೂಲದ ಚೆಸ್ ತಾರೆ ಪ್ರಗ್ನಾನಂದನ್ ಅವರು ವಿಶ್ವನಾಥನ್ ಆನಂದ್ ನಂತರ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2024ರ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಇವರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ಆಟಗಾರರು 2024ರ ಡಿಂಗ್ ಲಿರೆನ್ ಈವೆಂಟ್‌ಗೆ ಅರ್ಹತೆ ಪಡೆಯುತ್ತಾರೆ. ಕಳೆದ ವರ್ಷ ನಾರ್ವೆ ಚೆಸ್ ಗ್ರೂಪ್ ಎ ಪಡೆಯುತ್ತಾರೆ. ಕಳೆದ ವರ್ಷ ನಾರ್ವೆ ಚೆಸ್ ಗ್ರೂಪ್ ಎ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಆರ್. ಪ್ರಗ್ನಾನಂದನ್ ಚಾಂಪಿಯನ್ ಆಗಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.