logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ ಪದಾಧಿಕಾರಿಗಳ ಪದಗ್ರಹಣ (MITDA)

ಟ್ರೆಂಡಿಂಗ್
share whatsappshare facebookshare telegram
31 Jul 2024
post image

ಮಂಗಳೂರು: ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ 2024-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.20 ಶನಿವಾರ ಸಂಜೆ ಹೋಟೆಲ್ ದೀಪಾ ಕಂಫರ್ಟ್ನಲ್ಲಿ ಜರಗಿತು.

ಅಧ್ಯಕ್ಷರಾಗಿ ಟಾಲಿ ಕಂಪ್ಯೂಟರ್ಸ್ ಮಾಲಕರಾದ ಜಗದೀಶ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶ್ರೀ ಭಾರತಿ ಸಿಸ್ಟಮ್ಸನ ಮಾಲಕರಾದ ಶಂಕರನಾರಾಯಣ ಕಾರಂತ್, ಕಾರ್ಯದರ್ಶಿಯಾಗಿ ಡಿಯೊ ಟೆಕ್ ಗ್ಲೋಬಲ್‌ನ ಪಾಲುದಾರರಾದ ರವಿ ಭಟ್, ಖಜಾಂಚಿಯಾಗಿ ಚತುರ್ ಟೆಕ್ನಾಲಜಿಸ್‌ ಮಾಲಕರಾದ ಜಯಪ್ರಕಾಶ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀನಿಧಿ ಸಿಸ್ಟಮ್ಸನ ಮಾಲಕರಾದ ರಾಜೇಶ್ ಅಧಿಕಾರ ಸ್ವೀಕರಿಸಿದರು.

ಕರ‍್ಯಕಾರಿ ಸಮಿತಿಯ ಸದಸ್ಯರಾಗಿ ಆರ್ಯ ಎಂಟರ್‌ಪ್ರೈಸ್ ನ ನಿರ್ದೆಶಕರಾದ ಮುರಳಿ ಎಚ್., ಸಾಫ್ಟ್ ಲಿಂಕ್ ಮಾಲಕರಾದ ಗಣೇಶ್, ಐ ಕೇರ್ ಕಂಪ್ಯೂಟರ್ಸ್ ಮಾಲಕರಾದ ಲೋಕೇಶ್, ಇಲೆಕ್ಟೊçಟೆಕ್ ಸಿಸ್ಟಮ್ಸ್ ಪಾಲುದಾರರಾದ ಭರತ್ ಶೆಟ್ಟಿ, ಎ.ಎನ್. ಎಂಟರ್‌ಪ್ರೈಸ್ ನ ಪಾಲುದಾರರಾದ ನಿರಂಜನ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾದ ಭರತ್ ಶೆಟ್ಟಿ ತಮ್ಮ ನರ‍್ಗಮನ ಭಾಷಣದಲ್ಲಿ ಸಂಸ್ಥೆಯ ಕಳೆದ ಅವಧಿಯ ಕರ‍್ಯಕ್ರಮಗಳ ವಿವರಗಳನ್ನು ನೀಡಿದರು.

ಅಧಿಕಾರ ವಹಿಸಿಕೊಂಡ ಅಧ್ಯಕ್ಷರಾದ ಜಗದೀಶ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.

ಕರ‍್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಭರತ್ ಶೆಟ್ಟಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು ಮತ್ತು ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಟದ ರಾಜ್ಯ ಸದಸ್ಯರಾಗಿ ಆಯ್ಕೆಯಾದ ಮುರಳಿ ಹೆಚ್ ಅವರನ್ನು ಗೌರವಿಸಲಾಯಿತು.

ಮಂಗಳೂರು ಕಂಪ್ಯೂಟರ್ ವಿತರಕರ ಸಂಘದ (ಎಮ್‌ಐಟಿಡಿಎ) ಪೂರ್ವಧ್ಯಕ್ಷರಾದ ಗೋಪಿನಾಥ್, ಕೇತನ್ ಚಂದ್ರಾನ, ಸಾಯಿ ರಾವ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಶಂಕರ್ ನಾರಾಯಣ ಪ್ರಾರ್ಥನೆ ನೆರವೇರಿಸಿದರು, ಜಗದೀಶ್ ಸ್ವಾಗತಿಸಿ, ರವಿ ಭಟ್ ವಂದನಾರ್ಪಣೆ ಸಲ್ಲಿಸಿದರು. ಮುರಳಿ ಕಾರ್ಯಕ್ರಮವನ್ನು ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.